ರಿಪಬ್ಲಿಕ್ ಟಿವಿಯ ಸ್ಟಾರ್ ಸಂಪಾದಕ ಮತ್ತು ಆಂಕರ್ ಅರ್ನಾಬ್ ಗೋಸ್ವಾಮಿ ಮೇಲೆ ಹಲ್ಲೆ

ಆದರೆ ರಿಪಬ್ಲಿಕ್ ಟಿವಿಯ ಸ್ಟಾರ್ ಪತ್ರಕರ್ತ, ಸಂಪಾದಕ ಮತ್ತು ಟಿವಿಯ ಆಂಕರ್ ಅರ್ನಾಬ್ ಗೋಸ್ವಾಮಿ ಅವರ ಮೇಲೆ ನಿನ್ನೆ ಮಧ್ಯರಾತ್ರಿಯ ಸುಮಾರಿಗೆ ಹಲ್ಲೆ ನಡೆದಿದೆ.

ನಿನ್ನೆ ತಡರಾತ್ರಿ ತಮ್ಮ ಪತ್ನಿಯ ಜತೆ ಅವರು ಮನೆಯತ್ತ ಹೋಗುತ್ತಿದ್ದರು. ಮನೆಗೆ ಕಾರಿನಲ್ಲಿ ಹೋಗುತ್ತಿರುವಾಗ ಎರಡು ಬೈಕ್ ಗಳಲ್ಲಿ ಇಬ್ಬರು ಕಾರಿನ ಸಮಾನಾಂತರವಾಗಿ  ಬೈಕ್ ಚಲಾಯಿ ಸುತ್ತಾ, ಕಾರಿನೊಳಗೆ ಯಾರಿದ್ದಾರೆ ಎಂದು ಇಣುಕಿ ಮೊದಲು ಪ್ರಯತ್ನಿಸಿದರು. ನಂತ್ರ ಬೈಕನ್ನು ವೇಗವಾಗಿ ಮುಂದೆ ಚಲಾಯಿಸಿ ಆ ನಂತರ ಕಾರಿನ ಎದುರು ಬೈಕ್ ತಂದು ನಿಲ್ಲಿಸಿದರು. ಕಾರಿನ ಗ್ಲಾಸ್ ಗೆ ಜೋರಾಗಿ ಹೊಡೆದರು ಮತ್ತು ಕಪ್ಪು ಮಸಿ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟರಲ್ಲಿ ಅರ್ನಾಬ್ ಕಾರನ್ನು ಹಿಂಬಾಲಿಸಿ ಬರುವ ಅವರ ಭದ್ರತಾ ಸಿಬ್ಬಂದಿಗಳು ವ್ಯಕ್ತಿಗಳನ್ನು ಗಮನಿಸಿದರು ಎಂದು ವರದಿಯಾಗಿದೆ.

ಘಟನೆ ನಡೆದ ನಂತರ, ಮುಂಬೈಯ NM ಜೋಶಿ ಮಾರ್ಗ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಅರ್ನಾಬ್ ಗೋಸ್ವಾಮಿ ಅವರು, ಈ ಹಲ್ಲೆಗೆ ಸೋನಿಯಾ ಅವರೇ ನೇರ ಕಾರಣ ಅಂದಿದ್ದಾರೆ.

ನಿನ್ನೆಯಷ್ಟೇ ಸಾಧು ಸಂತರ ಹತ್ಯೆಯ ಬಗೆಗೆ ಸೋನಿಯಾ ಗಾಂಧಿ ವಿರುದ್ಧ ಅರ್ನಾಬ್ ಗೋಸ್ವಾಮಿ ನೀಡಿದ ಹೇಳಿಕೆಯ ಮೇರೆಗೆ ಅರ್ನಾಬ್ ವಿರುದ್ಧ FIR ದಾಖಲಾಗಿತ್ತು.

ಅರ್ನಾಬ್ ಗೋಸ್ವಾಮಿ ಅವರು ಮೋದಿಯವರ ನೀತಿಯ ಪ್ರಬಲ ಪ್ರತಿಪಾದಕರಾಗಿದ್ದು, ಸ್ಟಾರ್ ಪತ್ರಕರ್ತರಾಗಿದ್ದಾರೆ.

Leave A Reply

Your email address will not be published.