ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ 30,000 ದಿನಬಳಕೆಯ ಕಿಟ್ | ಪ್ರತಿ ಬೂತ್ ಗಳಲ್ಲಿ ವಿತರಣೆ | ಡಾ. ಹೆಗ್ಗಡೆ ಅವರಿಂದ ಚಾಲನೆ

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಹಾರ ಯಜ್ಞಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಳ್ತಂಗಡಿ ತಾಲೂಕಿನ ಎಲ್ಲಾ 81 ಗ್ರಾಮಗಳ ಬೂತ್ ಬೂತ್ ಗಳಿಗೆ ಅನ್ನಾಹಾರದ ದಿನ ಬಳಕೆಯ ವಸ್ತುಗಳನ್ನು ಜನರಿಗೆ ತಲುಪಿಸಲು ಲಾರಿಗಳು, ಟೆಂಪೊ, ಬೋಲೇರೋ ಪಿಕಪ್ ಸಾಲುಗಟ್ಟಿ ಸಂಭ್ರಮದಿಂದ ಹೊರಟಿವೆ.

ತಾಲೂಕಿನ ನೂರಲ್ಲ, ಸಾವಿರವಲ್ಲ, ಬರೋಬ್ಬರಿ 30000 ಮನೆಗಳಿಗೆ ಆಹಾರದ ಕಿಟ್ ದೊರೆಯಲಿದೆ.
ಅಂದರೆ, ಹೆಚ್ಚು ಕಮ್ಮಿ ಕ್ಷೇತ್ರದ ಮುಕ್ಕಾಲು ಭಾಗದ ಜನರು ಏಕಕಾಲದಲ್ಲಿ ಇದರ ಸಹಾಯವನ್ನು ಪಡೆದುಕೊಳ್ಳಲಿದ್ದಾರೆ!

ಹಲವಾರು ದಾನಿಗಳ ಕೊಡುಗೆ, ಸಾವಿರಾರು ಶ್ರಮಿಕರ ಶ್ರಮ ಮತ್ತು ಬೆಳ್ತಂಗಡಿಯ ಶಾಸಕರ ಮುತುವರ್ಜಿಯಿಂದ ಕೈಗೊಂಡ ಕಾರ್ಯವೊಂದು ಸಾಕಾರಗೊಂಡಿದೆ. ಇಂದು ಬೆಳಿಗ್ಗೆ ಅದರ ಉದ್ಘಾಟನಾ ಕಾರ್ಯಕ್ರಮವು ಧರ್ಮಸ್ಥಳದಲ್ಲಿ ನಡೆದಿದ್ದು ಅದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು, ಶಾಸಕ ಹರೀಶ್ ಪೂಂಜ, ಸಂಸದ ನಳೀನ್ ಕುಮಾರ್ ಕಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಧನಲಕ್ಷ್ಮಿ, ಸುಧೀರ್ ಆರ್ ಸುವರ್ಣ, ಪ್ರಶಾಂತ್ ಪಾರೆಂಕಿ, ಸದಾನಂದ ಪೂಜಾರಿ ಉಂಗಿಲ ಬೈಲ್ ಮತ್ತು ವೀರೇಂದ್ರ ಹೆಗ್ಗಡೆಯವರ ಕಾರ್ಯದರ್ಶಿ ವೀರು ಶೆಟ್ಟಿ ಅವರು ಪಾಲ್ಗೊಂಡಿದ್ದರು.

ಕೊರೊನಾ ಹಿನ್ನಲೆ ಲಾಕ್ ಡೌನ್ ನಿಂದ ಕೊರೋನಾ ಸಂಕಷ್ಟದಲ್ಲಿರುವ ಬೆಳ್ತಂಗಡಿ ತಾಲೂಕಿನ ಯಾರೇ ಆಗಲಿ ಹಸಿದು ಕೂರಬಾರದು ಎಂಬ ಏಕ ಉದ್ದೇಶದಿಂದ ಶಾಸಕ ಹರೀಶ್ ಪೂಂಜ ಮತ್ತವರ ತಂಡ ದೊಡ್ಡ ಮಟ್ಟದ ಆಹಾರ ಪೂರೈಕೆಗೆ ಕೈ ಹಾಕಿದ್ದಾರೆ.

ಉಜಿರೆಯ ಹೈಸ್ಕೂಲು ಮೈದಾನದಿಂದ ಸಾಲುಗಟ್ಟಿ ಹೊರಟ ವಾಹನಗಳು. ಇವತ್ತು ಸೂರ್ಯ ಕಂತುವ ಮುನ್ನ ಬೆಳ್ತಂಗಡಿ ತಾಲೂಕಿನ 241 ಬೂತ್​ಗೆ ತಲಾ 100 ರಂತೆ ಕಿಟ್ ಗಳ ವಿತರಣೆ ಆಗಲಿದೆ. ಅರ್ಹ ಫಲಾನಭವಿಗಳಿಗಳ ಪಟ್ಟಿ ಈಗಾಗಲೇ ಸಿದ್ಧವಿದೆ. ಅದಕ್ಕಾಗಿ ಆಯಾ ಗ್ರಾಮಗಳ, ಬೂತ್ ಗಳ ಹುಡುಗರು ಕಿಟ್ ಗಳ ವಿತರಣೆ ಮಾಡಲಿದ್ದಾರೆ.

ಆಹಾರದ ಕಿಟ್ ತಯಾರಿಕೆಯ ಕಾರ್ಯವು ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಉದ್ಯಮಿಗಳಾದ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್  ಹಾಗೂ ರಾಜೇಶ್ ಪೈ ಸಂದ್ಯಾ ಟ್ರೇಡರ್ಸ್ ಇವರ ಉಸ್ತುವಾರಿಯಲ್ಲಿ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರ ಸಹಕಾರದಲ್ಲಿ ಕಿಟ್ ತಯಾರಿಯ ಕೆಲಸ ನಡೆದಿತ್ತು.

Leave A Reply

Your email address will not be published.