ಅಮ್ಚಿನಡ್ಕದಲ್ಲಿ ಸಂಪ್ಯ ಪೊಲೀಸರ ಕಾರ್ಯಾಚರಣೆ| ಕಳ್ಳ ಬಟ್ಟಿ ಸಾಗಾಟ ಪತ್ತೆ

ಪುತ್ತೂರು: ಕಳ್ಳಬಟ್ಟಿ ತಯಾರಿಸಿ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ (ಸಂಪ್ಯ)ಪೊಲೀಸರು ದಾಳಿ ನಡೆಸಿ ಆರೋಪಿ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ಸಂಪ್ಯ ಠಾಣಾ ಎಸೈ ಉದಯರವಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರ ಮಂಗಲ ಸಮೀಪದ ಪಂಜೋಡಿ ನಿವಾಸಿ ಕೇಶವ ಪಾಟಾಳಿ ಎಂಬವನನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ 10 ಲೀ.ಕಳ್ಳಬಟ್ಟಿ ಸಾರಾಯಿ ಹಾಗೂ ವಾಹನದ ಮೌಲ್ಯ ಸೇರಿ 2 ಲಕ್ಷದ 67 ಸಾವಿರ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಎಸೈ ಉದಯ ರವಿ,ಸಿಬಂದಿಗಳಾದ ಧರ್ಮಪಾಲ,ದೇವರಾಜ್,ಕರುಣಾಕರ,ಸಂಗೊಳ್ಳಿ ಬಸವರಾಜ್ ,ಚಾಲಕ ಹರೀಶ್ ಅವರು ಪಾಲ್ಗೊಂಡಿದ್ದರು.

Leave A Reply

Your email address will not be published.