ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮತ್ತೊಂದು ಕೊರೋನಾ ಪಾಸಿಟೀವ್ !

ದಕ್ಷಿಣಕನ್ನಡದ ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಬಂಟ್ವಾಳದ 67 ವರ್ಷ ವಯಸ್ಸಿನ ಮಹಿಳೆಗೆ ಕೋರೋನಾ ಸೋಂಕು ಇರುವುದು ಖಚಿತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ಇದೆ. ಮಹಿಳೆಗೆ ತೀವ್ರಸ್ವರೂಪದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.

ಈಕೆ ಬಂಟ್ವಾಳದಲ್ಲಿ ಕೋರೋನಾದಿಂದ ಮೃತ ಮಹಿಳೆಯ ನೆರೆ ಮನೆಯಲ್ಲಿ ವಾಸವಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೃತ ಮಹಿಳೆಯು ಹಲವು ಮಹಿಳೆಯರೊಂದಿಗೆ ಸಂಪರ್ಕ ಬೆಳೆಸಿದ್ದ ಪರಿಣಾಮ ಇನ್ನಷ್ಟು ಮಂದಿಗೆ ಕೋರೋನಾ ಸೋಂಕು ತಗುಲಿರುವ ಶಂಕೆ ಮೂಡಿದೆ. ಇಷ್ಟೆಲ್ಲಾ ಕಟ್ಟೆಚ್ಚರ ಗಳ ನಡುವೆಯೂ ಸೋಂಕು ಹರಡುತ್ತಿರುವುದು ದಕ್ಷಿಣ ಕನ್ನಡದಲ್ಲಿ ಒಂದು ರೀತಿಯ ಆತಂಕವನ್ನು ಸೃಷ್ಟಿಸಿದೆ.

ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಒಟ್ಟು ಏಳು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ ಬಂಟ್ವಾಳದ ಈ ಮಹಿಳೆ P 409 ಆಗಿದ್ದು , ರಾಜ್ಯದಲ್ಲಿ ಒಟ್ಟು 415 ಜನರಿಗೆ ಕೋರೋನಾ ಸೋಂಕು ತಗುಲಿದೆ.

ಈ ಮೂಲಕ ದಕ್ಷಿಣ ಕನ್ನಡದಲ್ಲಿ ಒಟ್ಟು 16 ಕೋರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ, ಬಂಟ್ವಾಳದ 50 ವರ್ಷ ವಯಸ್ಸಿನ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈಗ ಒಟ್ಟು ಮೂವರು ಚಿಕಿತ್ಸೆಯಲ್ಲಿದ್ದಾರೆ. ಒಟ್ಟು 12 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

Leave A Reply

Your email address will not be published.