ಸುಳ್ಯ ಕೆವಿಜಿ | ಇಲ್ಲಿನ ವೈದ್ಯ ವಿದ್ಯಾರ್ಥಿಗೆ ಬೀಫ್ ಬೇಕೆಂದು ರಾತ್ರಿಯಿಡೀ ಕ್ಯಾಂಟೀನ್ ಮಾಲೀಕರ ಪೀಡನೆ !!

ಸುಳ್ಯ: ಕೊರೊನಾ ಸಂತ್ರಸ್ತ ದೇಶದಲ್ಲಿ ಜನರು ಊಟಕ್ಕಿಲ್ಲದೆ ಪರದಾಡುವ ಅದೆಷ್ಟೋ ಜನರಿದ್ದಾರೆ. ಆದ್ರೆ ಇಲ್ಲೊಬ್ಬ ಊಟಕ್ಕಿದ್ರೂ ಇದರ ಜೊತೆ ಆತನಿಗೆ ತಿನ್ನಲು ಬಿಸಿ ಬಿಸಿ ಬೀಫ್ ಬೇಕಂತೆ.

ಹಾಗೆಂದು ಯಾರಾದರೂ ಕೇಳಿದ್ದರೆ ಅವನನ್ನು ಕ್ಷಮಿಸಿ ಬಿಡಬಹುದಿತ್ತು. ಆದರೆ ಹಾಗೆ ಕೇಳಿ ದಾಂಧಲೆ  ಎಬ್ಬಿಸಿದವನು ಸುಳ್ಯದ ಕೆವಿಜಿಯ ವೈದ್ಯ ವಿದ್ಯಾರ್ಥಿ ! ಅದೂ ಊಟದ ಕ್ಯಾಂಟೀನ್ ಒಂದರಲ್ಲಿ.

ಆದರೆ ಇದು ನಡೆದದ್ದು ಸುಳ್ಯ ಕೆವಿಜಿಯ ವೈದ್ಯ ವಿದ್ಯಾರ್ಥಿ ಊಟ ಮಾಡುವ ಕ್ಯಾಂಟೀನ್ ನಲ್ಲಿ. ಅಲ್ಲಿನ ವೈದ್ಯ ವಿದ್ಯಾರ್ಥಿಯೊಬ್ಬ ಕ್ಯಾಂಟೀನ್ ಮಾಲೀಕನಿಗೆ ಬೀಫ್ ಸಾರು ಮಾಡಿಕೊಡುವಂತೆ ರಾತ್ರಿಯಿಡೀ ಪೀಡಿಸಿದ್ದಾನೆ. ಅಷ್ಟೇ ಅಲ್ಲದೆ ಕ್ಯಾಂಟೀನ್ ಮಾಲೀಕನಿಗೆ ಜೀವ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.

ಆತ ಸುಳ್ಯ ಕೆವಿಜೆ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ತಮಿಳುನಾಡು ಮೂಲದವನೆಂದು ತಿಳಿದು ಬಂದಿದೆ. ಈತ ತನ್ನ ಮಿತ್ರನ ರೂಮಿನಲ್ಲಿ ತಂಗಿದ್ದು, ರಾತ್ರಿ ಏಕಾಏಕಿ ಮಿತ್ರನ ರೂಮಿಗೆ ಊಟ ತಂದು ಕೊಡುವ ಕ್ಯಾಂಟೀನ್ ಮಾಲೀಕರಿಗೆ ಬೀಫ್ ನ ಬೇಡಿಕೆ ಇಟ್ಟಿದ್ದ.
ಅದೂ ಒಂದು ಕೆಜಿ ಬೀಫ್ ಮಾಂಸ ತಂದು ಸಾರು ಮಾಡು ಎಂದು ತಾಕೀತು ಮಾಡಿದ್ದ. ಈ ಕೂಡಲೇ ಅಡುಗೆ ಮಾಡಿಕೊಡುವಂತೆ ಪೀಡಿಸಿದ್ದಾನೆ.

ಕ್ಯಾಂಟೀನ್ ಮಾಲೀಕ ಸಹಜವಾಗಿ ನಿರಾಕರಿಸಿದ್ದಾರೆ.
ನಾವು ಬೀಫ್ ತಿನ್ನುವುದಿಲ್ಲ. ಮಾಡುವುದಿಲ್ಲ. ಮಾಡಿಯೂ ಗೊತ್ತಿಲ್ಲ ಅಂದಿದ್ದಾರೆ. ಆಗ ಆತ ಮಾಡಿ ಕೊಟ್ಟಿಲ್ಲ ಅಂದ್ರೆ ಬಿಡುವುದಿಲ್ಲ. ಅಲ್ಲದೆ ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾನೆ ಎನ್ನಲಾಗಿದೆ.

ಅಷ್ಟು ಮಾತ್ರವಲ್ಲದೆ ತಡರಾತ್ರಿವರೆಗೂ ಕ್ಯಾಂಟಿನಿನ ಗೇಟಿಗೆ ಒದ್ದು ರಾತ್ರಿಯಿಡೀ ರೌಡ್ಯಿಸಂ ತೋರಿಸಿದ್ದಾನೆ. ಅಲ್ಲದೆ ಸ್ಥಳೀಯರಿಗೂ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಯ ಪ್ರಭಾವಕ್ಕೆ ಬೆದರಿದ ಕ್ಯಾಂಟೀನ್ ಮಾಲೀಕರು ದೂರು ದಾಖಲಿಸಲು ಸಹ ಹಿಂಜರಿದಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.