ಪುತ್ತೂರು ನಿವಾಸಿಗಳಿಗೆ ಅಗತ್ಯ ದಿನಸಿ ಪದಾರ್ಥಗಳ ಕಿಟ್ ವಿತರಣೆ


ಲಾಕ್ ಡೌನ್ ಎಂಬ ದಿನಗಳು ಎಷ್ಟು ಕಠೋರ ವೆಂದರೆ ಯಾವ ಭಾಗಗಳಲ್ಲಿ ಯಾರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪುತ್ತೂರು ನಿವಾಸಿಗಳಾದ ಒಂದು ಬಡ ಕುಟುಂಬವು ಸುಳ್ಯದ ಪ್ರತಿಷ್ಠಿತ ಭಾಗವಾದ ಕೆವಿಜಿ ಕ್ಯಾಂಪಸ್ಸಿನ ಸಮೀಪ ಬಾಡಿಗೆ ರೂಮಿನಲ್ಲಿ ವಾಸಿಸುತ್ತಿದ್ದು ಕುಟುಂಬದ ಯಜಮಾನ ಗಾರೆ ಕೆಲಸ ಮಾಡಿ ಕುಟುಂಬದ ಜೀವನ ಸಾಗಿಸುತ್ತಿದ್ದರು. ಕೊರೋಣ ಮಹಾಮಾರಿ ವೈರಸ್ಸಿನ ಹಿನ್ನೆಲೆಯಲ್ಲಿ ಭಾರತ ಲಾಕ್ಡೌನ್ ಗೊಂಡಾಗ ಮಾರ್ಚ್ 31 ರಿಂದ ಏ.20ರವರೆಗೆ ತಮ್ಮ ಬಳಿಯಿದ್ದ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಬಂದರು. ಆದರೆ ಅದೀಗ ಮುಕ್ತಾಯಗೊಂಡು ಮುಂದೇನು ? ಎಂಬ ಚಿಂತೆ ಗೊಳಗಾಗಿ ,ಈ ಊರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಇವರು ಏಪ್ರಿಲ್ 21ರಂದು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಿದ ಶಕುಂತಲಾ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ನಾಯಕರಾದ ಸುಳ್ಯ ನ.ಪಂ ಸದಸ್ಯ ವೆಂಕಪ್ಪ ಗೌಡರಿಗೆ ಮಾಹಿತಿ ನೀಡಿದ ಹಿನ್ನೆಲೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅವರು ಏಪ್ರಿಲ್ 21ರಂದು ನಗರ ಪಂಚಾಯತ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಅನ್ನು ವಿತರಿಸಿ ಸಹಕರಿಸಿದರು.


Ad Widget

ಈ ಸಂದರ್ಭದಲ್ಲಿ ಕೆವಿಜಿ ಕೋ-ಆಪರೇಟಿವ್ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ ಕೆ.,ನಗರ ಪಂಚಾಯತಿ ಸಿಬ್ಬಂದಿ ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.

Ad Widget

Ad Widget

Ad Widget
error: Content is protected !!
Scroll to Top
%d bloggers like this: