ಉಪ್ಪಿನಂಗಡಿಯ P325 ಕೊರೊನಾ ಸೋಂಕಿತನ ಪತ್ನಿಗೂ ಕೊರೊನಾ ದೃಢ !

ಮಂಗಳೂರು, ಎ.19: ಕೋವಿಡ್-19 ಸೋಂಕಿನ ಕಾರಣದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಸುದ್ದಿಯಿಂದ ಆಘಾತದಲ್ಲಿರುವ ದಕ್ಷಿಣ ಕನ್ನಡದಲ್ಲಿ ಮತ್ತೊಂದು ಸೋಂಕು ಪ್ರಕರಣ ಪಾಸಿಟಿವ್ ಆಗಿದೆ.

ಎ.16ರಂದು ಪಾಸಿಟಿವ್ ಆಗಿದ್ದ ಉಪ್ಪಿನಂಗಡಿನಿವಾಸಿಯ ಪತ್ನಿಗೆ ಸೋಂಕು ತಾಗಿದ್ದು ದೃಢವಾಗಿದೆ. P325 ಎಂದು ಗುರುತಿಸಲಾಗಿದ್ದ ಉಪ್ಪಿನಂಗಡಿ ಮೂಲದ ವ್ಯಕ್ತಿಯ ಸಂಪರ್ಕದಿಂದ ಆತನ ಪತ್ನಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ.

30 ವರ್ಷ ವಯಸ್ಸಿನ ಮಹಿಳೆಗೆ ಸೋಂಕು ಕಂಡು ಬಂದ ಹಿನ್ನಲೆ ಜಿಲ್ಲೆಯ ಕೋವಿಡ್ ಆಸ್ಪತ್ರೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave A Reply

Your email address will not be published.