ಮಾ.20 ರಂದು KA51 AD 5832 ಬಸ್ಸಿನಲ್ಲಿ ಪ್ರಯಾಣಿಸಿದ್ದರೆ ತಕ್ಷಣವೇ ಟೆಸ್ಟ್ ಮಾಡಿಸಿಕೊಳ್ಳಿ – ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಕಳೆದ ತಿಂಗಳು 20ನೇ ತಾರೀಖಿನಂದು ನೀವು ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸಿದ್ದಲ್ಲಿ ಈ ಸುದ್ದಿಯನ್ನೊಮ್ಮೆ ಓದಿ. ಇದನ್ನು ಮಂಗಳೂರು ಜಿಲ್ಲಾಧಿಕಾರಿಯವರು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

ಮಾರ್ಚ್ 20 ನೇ ತಾರೀಖಿನಂದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಭಾರತೀ ಟ್ರಾವೆಲ್ಸ್ ನ ಬಸ್ ಸಂಖ್ಯೆ KA 51, AD 5832ರಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ 19 ವೈರಸ್ ಪರೀಕ್ಷೆಯಲ್ಲಿ ಇಂದು ಪಾಸಿಟಿವ್ ಸಾಬೀತಾಗಿದೆ.

ಹಾಗಾಗಿ ಈ ದಿನಾಂಕದಂದು ಈ ಬಸ್ಸಿನಲ್ಲಿ ಪ್ರಯಾಣಿಸಿರುವವರೆಲ್ಲರೂ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ವಿನಂತಿಸಿಕೊಂಡಿದ್ದಾರೆ. ಆ ದಿನ ಈ ಬಸ್ಸಿನಲ್ಲಿ 32 ಜನ ಪ್ರಯಾಣಿಸಿದ್ದು ಅವರೆಲ್ಲರೂ ತಕ್ಷಣವೇ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಆದಷ್ಟು ಜನರಿಗೆ ಶೇರ್ ಮಾಡಿ. ಸೊಂಕಿತರ ಬಸ್ಸಿನಲ್ಲಿ ಪ್ರಯಾಣಿಸಿದವರು ಎಷ್ಟು ಬೇಗ ಪತ್ತೆ ಆಗುತ್ತಾರೋ, ಅಷ್ಟು ಒಳ್ಳೆಯದು: ಅವರಿಗೂ, ಅವರ ಕುಟುಂಬ ಮತ್ತು ಜನಸಾಮಾನ್ಯರಿಗೂ.

Leave A Reply

Your email address will not be published.