ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಮತ್ತು ಸೌತಡ್ಕ ದೇವಸ್ಥಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ನಿಧನ

ಪುತ್ತೂರು : ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಮತ್ತು ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಪನೋಳಿಬೈಲು ದೇವಸ್ಥಾgನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಅವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಈಗ ಅವರು ಉಪ್ಪಿನಂಗಡಿ ಮತ್ತು ಪನೋಳಿ ಬೈಲು ಮತ್ತು ಸೌತಡ್ಕ ದೇವಸ್ಥಾನದ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹರಿಶ್ಚಂದ್ರ ಅವರು ಮೂಲತ ಸವಣೂರು ಸಮೀಪದ ಪಾಣೆ ನಿವಾಸಿ. ಪ್ರಸ್ತುತ ಮಂಗಳೂರು ಕೊಟ್ಟಾರ ಚೌಕಿಯಲ್ಲಿ ಮನೆ ಮಾಡಿ ಪತ್ನಿ ತ್ರಿವೇಣಿ, ಪುತ್ರ ಯಜ್ಞೇಶ್ ಜತೆ ವಾಸವಾಗಿದ್ದರು.

ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನ,ಪೊಳಲಿ ರಾಜರಾಜೇಶ್ವರಿ ದೇವಸ್ಥಾನ,ಶ್ರೀಕ್ಷೇತ್ರ ಕಲ್ಲುರ್ಟಿ ದ್ಯೆವಸ್ಥಾನ ಪನೋಳಿಬೈಲ್, ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವಾಸ್ಥಾನ ನಂದಾವರ, ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದಕ್ಕಿಂತ ಹಿಂದೆ ಅವರು ಪುತ್ತೂರು ವಿಭಾಗದ ದೇವಸ್ಥಾನಗಳ ಆಡಳಿತ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

Comments are closed.