ಸುಳ್ಯ ಜಯನಗರ ಮೂರನೇ ವಾರ್ಡಿನ ಬಡಜನತೆಗೆ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸಿದ ನ. ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡಂಕಿರಿ

ವರದಿ : ಹಸೈನಾರ್ ಜಯನಗರ

ಸುಳ್ಯ ನಗರ ಪಂಚಾಯಿತಿ ನ ಮೂರನೇ ವಾರ್ಡಿನ ಸದಸ್ಯ ಬಾಲಕೃಷ್ಣ ಭಟ್ ಕೊಡಂಕಿರಿರವರು ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಇದರ ವತಿಯಿಂದ ಜಯನಗರ ವಾರ್ಡಿನ ಸುಮಾರು 170 ಕ್ಕೂ ಹೆಚ್ಚು ಬಡ ಕುಟುಂಬಸ್ಥರಿಗೆ ತರಕಾರಿ ಮತ್ತು ಅಗತ್ಯ ವಸ್ತುಗಳ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಸಹಕರಿಸಿದ್ದಾರೆ.

ಈ ಸಂದರ್ಭದಲ್ಲಿ ಜಯನಗರ ಮೂರನೇ ವಾರ್ಡಿನ ಕಾವಲು ಸಮಿತಿಯ ಅಧ್ಯಕ್ಷ ದೀಕ್ಷಿತ್ ಜಯನಗರ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಸದಸ್ಯರಾದ ಅವಿಲ್, ಮುಹಮ್ಮದ್ ಮೊಟ್ಟೆತ್ತೊಡಿ, ಮೊದಲಾದವರು ಉಪಸ್ಥಿತರಿದ್ದರು.

ಹಾಗೂ ಇದೇ ವೇಳೆ ಅರ್ಹ ಬಡವರನ್ನು ಗುರುತಿಸಿ ಸುಮಾರು ಎಂಟು ಕುಟುಂಬಸ್ಥರಿಗೆ ನಗರ ಪಂಚಾಯತಿ ವತಿಯಿಂದ ತಲಾ 10 ಕೆಜಿ ಅಕ್ಕಿ ವಿತರಿಸಲಾಯಿತು. ನಗರ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ, ಸಿಬ್ಬಂದಿ ಶಶಿಕಲಾ ಉಪಸ್ಥಿತರಿದ್ದರು.

Leave A Reply

Your email address will not be published.