ಅಲ್-ಮದೀನ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಕಿಟ್ ವಿತರಣೆ

ಭಾರತ ಲಾಕ್ದೌನ್ ನಿಂದ ಜೀವನೋಪಾಯಕ್ಕೆ ಸಂಕಷ್ಟಕ್ಕೀಡಾಗಿರುವ ಹಿನ್ನಲೆ ಪೈಚಾರು ಪರಿಸರದಲ್ಲಿ
ಸುಮಾರು 30-40 ಅರ್ಹ ಕುಟುಂಬಕ್ಕೆ ಅಲ್ ಮದಿನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಡಿತರ ಸಾಮಗ್ರಿ ವಿತರಣೆ ನಡೆಯಿತು.ಟ್ರಸ್ಟ್ ನ ಅಧ್ಯಕ್ಷ ಅಶ್ರಫ್ ಪೈಚಾರ್ ನೇತೃತ್ವ ವಹಿಸಿದ್ದರು.

ಟ್ರಸ್ಟ್ ನ ವತಿಯಿಂದ ಈ ಹಿಂದೆಯು ಕೂಡ ಹಲವಾರು ಮಾಜಮುಖಿ ಕಾರ್ಯಕ್ರಮಗಳು ಕೂಡಾ ನಡೆದಿತ್ತು. ಇವರು ಕಳೆದ ವರ್ಷ ಕೊಡಗಿನಲ್ಲಿ ಪ್ರಕೃತಿ ವಿಕೋಪ ನಡೆದಾಗಲೂ ಅಲ್ಲಿಗೆ ಆಗಮಿಸಿ ಹಲವಾರು ಕುಟುಂಬಗಳಿಗೆ ಸಹಾಯ ಹಸ್ತ ನೀಡಿ ಸಹಕರಿಸಿದ್ದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅಶ್ರಫ್ ಪೈಚಾರ್, ಹನೀಫ್ ಪಿಕೆ, ಅಬ್ದುಲ್ ಕರೀಂ, ಸತ್ತಾರ್ ಪೈಚಾರ್, ಸಾಲಿ ಪೈಚಾರ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಹಸೈನಾರ್ ಜಯನಗರ

Comments are closed.