“ತುಂಡು ಬಟ್ಟೆಯ ಮೇಲಲ್ಲ, ದೇವರ ಮೇಲೆ ವಿಶ್ವಾಸವಿಡಿ” ಎಂದು ಮಾಸ್ಕ್ ಧರಿಸುವುದನ್ನು ಗೇಲಿ ಮಾಡಿದವನಿಗೆ ದಯಪಾಲಿಸಿದೆ ಕೋರೋನಾ !
ಸಾಗರ್ (ಮಧ್ಯಪ್ರದೇಶ) : ಕೋರೋನಾ ವೈರಸ್ ಸಾಂಕ್ರಾಮಿಕ ರೋಗವಾಗಿರುವ ಕಾರಣದಿಂದ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಜಾಗೃತಿ ಸಂದೇಶಗಳನ್ನು ಟಿಕ್ ಕಾಟ್ನಲ್ಲಿ ಗೇಲಿ ಮಾಡುತ್ತಿದ್ದ ಯುವಕನಿಗೆ ಇದೀಗ ಕೋವಿಡ್ ಸೋಂಕು ತಗುಲಿದೆ.
ಮಧ್ಯಪ್ರದೇಶ ಸಾಗರ್ ಪ್ರಾಂತ್ಯದ ಸಮೀರ್ ಖಾನ್ ಒಬ್ಬ ಟಿಕ್ ಟಾಕ್ ಸ್ಟಾರ್. ಆತ ಟಿಕ್ ಟಾಕ್ ನಲ್ಲಿ ಮಾಸ್ಕ್ ಧರಿಸುವುದನ್ನು ಲೇವಡಿ ಮಾಡುತ್ತಿದ್ದ. ಕೆಲವೊಂದು ಗೇಲಿಯ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದ.
‘ನೀನು ಮಾಸ್ಕ್ ಧರಿಸುವುದಿಲ್ಲವೇ’ ಎಂದು ಹಿನ್ನಲೆ ಯಲ್ಲಿ ಒಂದು ವ್ಯಕ್ತಿ ಕೇಳುತ್ತದೆ.
ಆಗ ‘ಈ ತುಂಡು ಬಟ್ಟೆಯ ಮೇಲೇಕೆ ನಿಮಗೆ ವಿಶ್ವಾಸ ? ವಿಶ್ವಾಸ ಇಡುವುದಾದರೆ ಮೇಲಿರುವವನ ಮೇಲೆ ಇಡು’ ಎಂಬ ಡೈಲಾಗ್ ಆತ ಹೊಡೆಯುತ್ತಾನೆ. ಈ ವಿಡಿಯೋ ಟಿಕ್ ಟಾಕ್ ನಲ್ಲಿ ಭಾರೀ ವೈರಲ್ ಆಗಿತ್ತು.
ಇತ್ತೀಚೆಗೆ ಸಮೀರ್ ಖಾನ್ ಜಬಲ್ಪುರದಲ್ಲಿಯ ತನ್ನ ಸಹೋದರಿ ಮನೆಗೆ ಭೇಟಿ ನೀಡಿದ್ದ. ದೇವರೇ ಇರುವಾಗ ಆತನಿಗೆ ಕೋರೋನಾದ ಚಿಂತೆಯೇ ? ಆದರೆ ಆತನಿಗೆ ಅಲ್ಲಿ ಉಸಿರಾಟದ ಸಮಸ್ಯೆ ಎದುರಾಗಿದೆ. ಪರೀಕ್ಷೆ ಮಾಡಿದಾಗ ಮೇಲಿರುವ ಆತನ ದೇವರು ಆತನ ಕೈ ಬಿಟ್ಟದ್ದು ಸ್ಪಷ್ಟವಾಗಿತ್ತು. ತಪಾಸಣೆ ನಡೆಸಿದ ಬಳಿಕ ಕೋರೋನಾ ಸೋಂಕು ದೃಢಪಟ್ಟಿತ್ತು.
ಇದೀಗ ತಾನಿರುವ ಆಸ್ಪತ್ರೆಯ ವಾರ್ಡ್ ನಲ್ಲಿ, ಅದೇ ತಾನು ಗೇಲಿ ಮಾಡಿದ ವಸ್ತುವನ್ನು ಮುಖಕ್ಕೆ ಕಟ್ಟಿಕೊಂಡು ಮಲಗಬೇಕಾಗಿದೆ. ದೇವರ ಮೇಲೆ ಅಷ್ಟು ಖಚಿತ ನಿಲುವು ಇರುವವನು ಅದ್ಯಾಕೆ ಆಸ್ಪತ್ರೆಯಲ್ಲಿದ್ದಾನೋ ?