ವಿವಿದೆಡೆ ಗುಡುಗು ಸಹಿತ ಆಲಿಕಲ್ಲು ಮಳೆ

ದಕ್ಷಿಣ ಕನ್ನಡದ ಹಲವೆಡೆ ಮಳೆ ಬಂದಿದೆ. ನಮ್ಮ ಸುಳ್ಯ, ಬೆಳ್ಳಾರೆಯಲ್ಲಿ ಆಲಿಕಲ್ಲು ಮಳೆ. ಜತೆಗೆ ಗುಡುಗು ಸಹಿತ ಮಳೆ ಬಿದ್ದಿದೆ.

ಸಂಪಾಜೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಜಡಿ ಮಳೆ ಬೀಳುವ ಲಕ್ಷಣವಿದೆ.

ಸವಣೂರು ಕಾಣಿಯೂರು ಮತ್ತೆ ವರುಣನ ಕೃಪೆ ಪಾತ್ರವಾಗಿದೆ. ಆಲಿಕಲ್ಲುಗಳ ಜತೆ ಸಿಡಿಲು ಗುಡುಗು ಸೇರಿಕೊಂಡಿದೆ.

ಆಲಂಕಾರು, ಕೊಯಿಲ, ಸವಣೂರು, ಆಲಂತಡ್ಕ, ಬೆಳ್ಳಾರೆ, ಸುಳ್ಯ, ಸವಣೂರು, ಮಾಡಾವು, ನೆಟ್ಟಾರು ಮಳೆರಾಯನ ದರ್ಶನ.

ವಿಟ್ಲದಲ್ಲಿ ಮತ್ತೆ ಮಳೆ ಬಿದ್ದಿದ್ದು, ಈ ಬಾರಿ ಆಲಿಕಲ್ಲು ಗಳ ಮಳೆ ಸ್ವಲ್ಪ ಜೋರಾಗಿಯೇ ಬಂದಿದೆ. ಜಾಸ್ತಿ ಕಲ್ಲು ಬಿದ್ದಿದೆ. ಆಲಿಕಲ್ಲು ಕಲೆಕ್ಟ್ ಮಾಡಿದ ಕೃತಿಕಾ ಅದರ ಚಿತ್ರ ಕಳಿಸಿದ್ದಾಳೆ.ನಾರಾವಿಯಲ್ಲೂ ಮಳೆ ಬಂದಿದೆ.

ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನಕೆರೆ ಮಳೆ ಇನ್ನೇನು ಬಿತ್ತು ಅಂತ ಖುಷಿ ಪಡುವಷ್ಟರಲ್ಲಿ ಮಂಗ ಮಾಯ. ಆಕಾಶ ನೋಡಿ ನೋಡಿ ಕೆಕ್ಕಿಲ್ ಬೇನೆ ಮಾತ್ರ ಬಂದಿದೆ.

Leave A Reply

Your email address will not be published.