ಗಾಂಧಿನಗರ ಜಟ್ಟಿಪಳ್ಳ ಭಾಗಗಳಿಂದ ವಾಹನಗಳು ರಸ್ತೆಗೆ ಬಾರದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಿದ ಪೊಲೀಸ್ ಇಲಾಖೆ

ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಳ್ಯ ನಗರದಲ್ಲಿ ಬೆಳಗ್ಗಿನ 4 ಗಂಟೆಗಳ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶವಿದ್ದು ಈ ಸಂದರ್ಭದಲ್ಲಿ ಅನಾವಶ್ಯಕವಾಗಿ ವಾಹನಗಳು ರಸ್ತೆಗೆ ಇಳಿಯದಂತೆ ಮುಂಜಾಗ್ರತ ವಹಿಸಿಕೊಳ್ಳಲು ಸುಳ್ಯ ನಗರದ ಜಟ್ಟಿಪಳ್ಳ ಜ್ಯೋತಿ ಸರ್ಕಲ್, ವಿವೇಕಾನಂದ ಸರ್ಕಲ್, ರಥಬೀದಿ , ಆಲೆಟ್ಟಿ ರಸ್ತೆ, ಮುಂತಾದ ಒಳ ರಸ್ತೆಗಳನ್ನೂ ಬ್ಯಾರಿ ಗೇಟ್ ಇಟ್ಟು ಬಂದ್ ಮಾಡಲಾಗಿತ್ತು ಕಾರಣ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಬರುವ ಗ್ರಾಹಕರು ತಮ್ಮ ವಾಹನಗಳನ್ನು ಬ್ಯಾರಿ ಗೇಟ್ ಬಳಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಬಂದು ತಮಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಪಡೆದುಕೊಳ್ಳುವ ಮತ್ತು ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ.

ಕಳೆದ ಹಲವಾರು ದಿನಗಳಿಂದ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾರ್ವಜನಿಕರ ಹಿತ ಕಾಪಾಡಿಕೊಳ್ಳಲು ಶ್ರಮಿಸುತ್ತಿದೆ. ಸರಕಾರ ಮತ್ತು ಮೇಲಾಧಿಕಾರಿಗಳು ನೀಡಿರುವಂತಹ ನಿರ್ದೇಶನಗಳನ್ನು ಪಾಲಿಸುವ ನಿಟ್ಟಿನಿಂದ ಹಾಗೂ ಜನತೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ರೀತಿಯ ಬಂದೋಬಸ್ತಿನ ಅಗತ್ಯವಿದೆ. ಇದಕ್ಕೆ ಸುಳ್ಯದ ಸರ್ವ ಜನತೆಯ ಸಹಕಾರ ನಮಗೆ ಬೇಕಾಗಿದೆ. ಸರಕಾರ ಮತ್ತು ಇಲಾಖೆ ಯಾವುದೇ ನಿಯಮಗಳನ್ನು ಜಾರಿಗೆ ತರುವುದಾದರೂ ಅದು ಸಾರ್ವಜನಿಕರ ಹಿತಕ್ಕಾಗಿ ಎಂದು ಗಮನಿಸಿ ಬಂದಿರುವಂತಹ ಮಾರಕ ಕೋರೋಣ ವೈರಸ್ಸನ್ನು ನಿರ್ಮೂಲನಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಈ ಸಂದರ್ಭದಲ್ಲಿ ಸುಳ್ಯದ ವೃತ್ತನಿರೀಕ್ಷಕ ನವೀನಚಂದ್ರ ಜೋಗಿ ಕೇಳಿಕೊಂಡಿದ್ದಾರೆ.

ವರದಿ : ಹಸೈನಾರ್ ಜಯನಗರ

Leave A Reply

Your email address will not be published.