ಬೈಕು ಕದ್ದದ್ದು ಕಳ್ಳ. ಕಳ್ಳನ ಜತೆ ಪೊಲೀಸರು ಹಾಗೂ ನ್ಯಾಯಾಧೀಶರಿಗೆ ಕೂಡಾ ಶಿಕ್ಷೆ !
ಕೊರೊನಾ ಅಪ್ಡೇಟ್ಸ್ (ಭಾರತ)
ಸೊಂಕಿತರು : 8446
ನಿಧನ : 288
ಗುಣಮುಖ : 969
ಕಳ್ಳತನದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದರು. ವಾಹನ ಕಳ್ಳತನ ಮಾಡುವ 24 ವರ್ಷದ ವ್ಯಕ್ತಿಯನ್ನು ಗಸ್ತು ಸಮಯದಲ್ಲಿ ಪೊಲೀಸರು ಕದ್ದ ಬೈಕ್ ನ ಸಮೇತ ಅರೆಸ್ಟ್ ಮಾಡಿದ್ದರು. ಕಳ್ಳನನ್ನು ನ್ಯಾಯಾಧೀಶರ ಮುಂದೆ ಪೊಲೀಸರು ತಂದು ಅನಂತರ ಜೈಲಿಗೆ ಕೂಡ ಕಳಿಸಿದ್ದರು.
ಕಳ್ಳನಿಗೆ ಕೆಮ್ಮು ಹಾಗೂ ಶೀತ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ಪರೀಕ್ಷೆಗೆಂದು ಕಳುಹಿಸಲಾಗಿತ್ತು ಮತ್ತು ಆತನ ರಿಪೋರ್ಟ್ ಪಾಸಿಟೀವ್ ಆಗಿ ಬಂತು.
ಕಳ್ಳನಿಗೆ ಕೋವಿಡ್ 19 ವೈರಸ್ ಪಾಸಿಟಿವ್ ಆಗಿರುವುದು ಈಗ ಪೊಲೀಸರು ಹಾಗೂ ನ್ಯಾಯಾಧೀಶರಿಗೆ ಕೂಡ ಶಿಕ್ಷೆ ಕೊಟ್ಟಂತೆ ಆಗಿದೆ. ಕಳ್ಳನನ್ನು ಕೂಡಿ ಹಾಕಿದಂತೆ ಈಗ ಪೊಲೀಸರನ್ನು ಮತ್ತು ನ್ಯಾಯಾಧೀಶರನ್ನು ಹೋಂ ಕ್ವಾರಂಟೈನ್ ಎಂಬ ಹೆಸರಿನಲ್ಲಿ ಕೂಡಿ ಹಾಕಲಾಗುತ್ತದೆ. ಕಳ್ಳನ ಸಂಪರ್ಕಕ್ಕೆ ಬಂದ ಒಟ್ಟು 17 ಜನ ಪೊಲೀಸ್ ರನ್ನು ಈಗ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಈ ಕೋರೋನಾ ಎಂಬ ರೋಗ ಏನು ಕೂಡಾ ಮಾಡಬಲ್ಲುದು. ಎಷ್ಟೋ ಜನ ಜೈಲಿನಲ್ಲಿರುವ ಚಿಕ್ಕ ಪುಟ್ಟ ಅಪರಾಧಿಗಳನ್ನು, ರೋಗಿಗಳಿಗೆ ಹೋಂ ಕ್ವಾರಂಟೈನ್ ಮಾಡಲು ಸ್ಥಳ ಬೇಕೆಂದು ಮನೆಗೆ ಕಳಿಸಿದೆ. ಈಗ ಪೊಲೀಸು ನ್ಯಾಯಾಧೀಶರನ್ನು ಕೂಡ ಗೃಹಬಂಧನದಲ್ಲಿ ಇರಿಸಿದೆ.