ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮರವನ್ನೇ ಹತ್ತಿ ಕುಳಿತ ವಕೀಲ !

ಉತ್ತರ ಪ್ರದೇಶ : ಕೊರೋನಾವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿದ್ದು, ಲಾಕ್ ಡೌನ್ ಸಂದರ್ಭ ಪರಿಣಾಮಕಾರಿಯಾಗಿ ಸಾಮಾಜಿಕ ಅಂತರ ಬೆಳೆಸಿಕೊಳ್ಳಲು ಈಗ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಹೊಸ ವಿಧಾನವೊಂದನ್ನು ಕಂಡುಕೊಂಡಿದ್ದಾರೆ.

ಉತ್ತರ ಪ್ರದೇಶದ ಹಪೂರ್ ಅಸೌರಾ ಗ್ರಾಮದ ವಕೀಲರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರವನ್ನೇ ತಾತ್ಕಾಲಿಕವಾಗಿ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಮನೆಯ ಪಕ್ಕದ ಮರಕ್ಕೆ ಅಟ್ಟನಿಗೆ ಕಟ್ಟಿ ಅದರಲ್ಲೇ ಮುಕುಲ್ ಅವರು ವಾಸಿಸುತ್ತಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ಮುಕುಲ್ ತ್ಯಾಗಿ ಈ ರೀತಿಯಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮನೆಯವರು ಮರದ ಮೇಲೆಯೆ ಊಟ ತಲುಪಿಸುತ್ತಾರೆ. ಸದ್ದುಗದ್ದಲವಿಲ್ಲದೆ ಮರದ ಮೇಲೆ ಕೂತು, ನಿರ್ಮಾನುಷ್ಯವಾಗಿರುವ ಬೀದಿಯತ್ತ ಕಣ್ಣು ಹಾಯಿಸಿ ಮೌನದೊಂದಿಗೆ ಮಾತಾಡುತ್ತಾ ಲಾಕ್ ಡೌನ್ ಕೊನೆಯಾಗುವುದನ್ನೆ ಕಾಯುತ್ತಾ ಕೂರುತ್ತಿದ್ದಾರೆ ಮುಕುಲ್.

ಕೊರೋನಾವೈರಸ್ ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯಲೋಕ ಹೇಳುತ್ತಿದೆ. ಅದರ ಜತೆ ನನಗೆ ಏಕಾಂತದಲ್ಲಿ ಬದುಕೋಣ ಅಂತನ್ನಿಸಿತು. ಬದುಕಲು ಮರವನ್ನೇ ತಾತ್ಕಾಲಿಕವಾಗಿ ಮನೆಯನ್ನಾಗಿ ಮಾಡಿಕೊಂಡು ಎಂಜಾಯ್ ಮಾಡುತ್ತಿರುವುದಾಗಿ ಮುಕುಲ್ ತ್ಯಾಗಿ ತಿಳಿಸಿದ್ದಾರೆ. 

ಹೆಂಡತಿಯಿಂದ ತಪ್ಪಿಸಿಕೊಳ್ಳಲು ಎಂತಹ ಸುಂದರ ಉಪಾಯ ಎಂದು ನಮ್ಮ ಗಾಂಪರ ಗೆಳೆಯರು ಮಾತಾಡಿಕೊಳ್ಳುತ್ತಿದ್ದಾರೆ.

Leave A Reply

Your email address will not be published.