ಸುಳ್ಯ | ಯಾದಗಿರಿ ಜಿಲ್ಲೆಯ ವಲಸಿಗರಿಗೆ ಸುಬ್ರಹ್ಮಣ್ಯದಲ್ಲಿ ಆಶ್ರಯ ಕಲ್ಪಿಸಿದ ತಾಲೂಕು ಆಡಳಿತ

ಯಾದಗಿರಿ ಜಿಲ್ಲೆಯ ವಲಸಿಗರಿಗೆ ಸುಬ್ರಹ್ಮಣ್ಯದಲ್ಲಿ ಆಶ್ರಯ ಕಲ್ಪಿಸಿದ ತಾಲೂಕು ಆಡಳಿತ ಹಲವು ದಿನಗಳಿಂದ ರಸ್ತೆಯಲ್ಲಿಯೇ ಟೆಂಟ್ ಹಾಕಿ ಜೀವನ ಸಾಗಿಸುತ್ತಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಒಟ್ಟು 13 ಮಂದಿ ನಿರಾಶ್ರಿತರನ್ನು ತಾಸಿಲ್ದಾರ್ ರವರ ನೇತೃತ್ವದಲ್ಲಿ ಸುಬ್ರಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 11ರಂದು ಆಶ್ರಯ ಕಲ್ಪಿಸಿ ನೀಡಲಾಗಿದೆ.

ರಸ್ತೆ ಡಾಮರೀಕರಣಕ್ಕೆ ಬಂದ ಕಾರ್ಮಿಕರು ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಉಳಿದಿದ್ದರು ಕೆಲವು ದಿನಗಳ ಹಿಂದೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ತಾಲೂಕು ಆಡಳಿತ ಇವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡಿ ಸಹಕರಿಸಿದರು.

ಆದರೆ ಇತ್ತೀಚೆಗೆ ಆ ಭಾಗದಲ್ಲಿ ಮಳೆ ಬರುತ್ತಿದ್ದು ಇದರಿಂದ ತೊಂದರೆಗೊಳಗಾಗಿದ್ದ ಇವರನ್ನು ಗಮನಿಸಿದ ತಾಲೂಕು ಆಡಳಿತ ಇವರನ್ನು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗೆ ಮನವಿ ಮಾಡಿ ಸ್ಥಳಾಂತರಿಸುವಲ್ಲಿ ಸಹಕರಿಸುತ್ತಾರೆ. ಈ ಸಂದರ್ಭದಲ್ಲಿ ಸುಳ್ಯ ತಹಸೀಲ್ದಾರ್ ಅನಂತ ಶಂಕರ್, ಸುಳ್ಯ ತಾಲ್ಲೂಕು ಪಂಚಾಯತ್ ಇ ಓ ಭವಾನಿಶಂಕರ್, ಸುಳ್ಯ ಕಂದಾಯ ನಿರೀಕ್ಷಕರು ಬಿ ಕೊರಗಪ್ಪ ಹೆಗ್ದೆ, ವಿ ಎ ಸುಜನ್ ಕೆ ಆರ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಹಸೈನಾರ್ ಜಯನಗರ

Leave A Reply

Your email address will not be published.