ದಕ್ಷಿಣಕನ್ನಡ ಕೋರೋನಾ ಹೋರಾಟ | ವೀಕೆಂಡ್ ಸಮ್ಮರಿ ರಿಪೋರ್ಟ್

ದ.ಕ ಜಿಲ್ಲೆಯಲ್ಲಿ ಶನಿವಾರ ದೊರೆತ ಎಲ್ಲಾ 46 ಮಂದಿಯ ಪರೀಕ್ಷಾ ವರದಿ ನೆಗೆಟಿವ್

ಮಂಗಳೂರು : ಕೊರೋನಾ ವ್ಯಾಧಿಯ ದ.ಕ ಸಂಘಟಿತ ಹೋರಾಟ ನಡೆಸುತ್ತಿದೆ. ಜಿಲ್ಲೆಯಲ್ಲಿ ಶನಿವಾರ ದೊರೆತ 46 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಶನಿವಾರ ಹೊಸದಾಗಿ 34 ಮಂದಿಯ ಗಂಟಲ ದ್ರವದ ಮಾದರಿಯನ್ನು ಹೊಸದಾಗಿ ಪ್ರಾರಂಭವಾದ ವೆನ್ಲಾಕ್ ಆಸ್ಪತ್ರೆಯಲ್ಲಿಯೆ ಪರೀಕ್ಷೆಗೆ ಕಳುಹಿಸಲಾಗಿದೆ.

ಮುಖ್ಯಾಂಶಗಳು

  • ಶನಿವಾರ 52 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದೆ.
  • ಇದುವರೆಗೆ ಒಟ್ಟು 38865 ಮಂದಿಯನ್ನು ಸ್ಕ್ರೀನಿಂಗ್ ಗೆ ಆದವರು.
  • 2598 ಮಂದಿ ಈಗ ಹೋಂ ಕ್ವಾರಂಟೈನ್ ನಲ್ಲಿ ಇರುವವರು.
  • ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ 23 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರುವವರು.
  • ಈ ಪೈಕಿ 8 ಮಂದಿ ಹೊಸದಾಗಿ ಸೇರ್ಪಡೆಯಾದವರು.
  • ಒಟ್ಟು 3347 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಅವಧಿಯನ್ನು ಶನಿವಾರ ಪೂರೈಸಿದ್ದಾರೆ. ಅವರಲ್ಲಿ ಕೊರೋನಾದ ಯಾವುದೇ ಲಕ್ಷಣಗಳು ಇಲ್ಲ.
  • ಇದುವರೆಗೆ 402 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿ ಬಂದಿದೆ. ಈ ಪೈಕಿ 12 ಪಾಸಿಟಿವ್, 390 ನೆಗೆಟಿವ್, 6 ಅ್ಯಕ್ಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಇದುವರೆಗೆ 12 ಮಂದಿ ಕೊರೋನಾ ಸೋಂಕಿತರ ಪೈಕಿ ಆರು ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
12 ಮಂದಿ ಸೋಂಕಿತರ 128 ಪ್ರಾಥಮಿಕ ಸಂಪರ್ಕಿತರು ಹಾಗೂ 593 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಇದುವರೆಗೆ 12 ಮಂದಿ ಕೊರೋನಾ ಸೋಂಕಿತರ ಪೈಕಿ ಆರು ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
12 ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರು 128 ಮಂದಿ ಹಾಗೂ 593 ದ್ವಿತೀಯ ಸಂಪರ್ಕಿತರು

ಆಶಾ ಕಾರ್ಯಕರ್ತರು ಈ ಎಲ್ಲ 6447 ಮನೆಗಳಿಗೆ ಭೇಟಿ ನೀಡಿ ಒಟ್ಟು 30663 ಜನರನ್ನು ಸಂಪರ್ಕಿಸಿದ್ದಾರೆ ಮತ್ತು ಅವರ ಆರೋಗ್ಯದ  ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.

Leave A Reply

Your email address will not be published.