ಸುಳ್ಯ | ಒಟಿಪಿ ಇಲ್ಲದೆ ಪಡಿತರ ವಿತರಣೆ | ಗ್ರಾಹಕರಿಗೆ ನಿರಾತಂಕ
ಕೇವಲ ಎರಡು ದಿನಗಳ ಹಿಂದಷ್ಟೇ, ನಾವು ಕೋಟ ಶ್ರೀನಿವಾಸ್ ಪೂಜಾರಿ ಮಾತಿಗೂ ಬೆಲೆಯಿಲ್ಲ ಎಂಬ ವರದಿ ಮಾಡಿದ್ದೆವು. ಈಗ ಜನರಿಗೆ ಸ್ಪಂದನೆ ಸಿಕ್ಕಿದೆ.
ಸುಳ್ಯ ತಾಲೂಕಿನಲ್ಲಿ ಒ. ಟಿ. ಪಿ. ರದ್ದುಗೊಳಿಸಿ ಇಂದು ಪಡಿತರ ವಿತರಿಸಲಾಗಿದ್ದು , ತಾಲೂಕಿನ 62 ನ್ಯಾಯ ಬೆಲೆ ಅಂಗಡಿಗಳ ಮೂಲಕ 2250 ಕುಟುಂಬ ಗಳಿಗೆ ಪಡಿತರ ವಿತರಿಸಲಾಗಿದೆ ‘ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಇಂದು ಸಂಜೆ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
“ ಮುಖ್ಯ ಉಗ್ರಾಣದಿಂದ ಎಲ್ಲಾ ಅಂಗಡಿಗಳಿಗೂ ತಕ್ಷಣ ದಾಸ್ತಾನು ಸರಬರಾಜು ಮಾಡಲಾಗುವುದು. ದಾಸ್ತಾನಿನಲ್ಲಿ ಯಾವುದೇ ಕೊರತೆ ಇಲ್ಲ. ನಗರ ಸಭೆಯ ವ್ಯಾಪ್ತಿಯಲ್ಲಿ ತಳ್ಳು ಗಾಡಿ, ಬೀದಿ ವ್ಯಾಪಾರಿ ಗಳಿಗೆ ನಿರ್ಬಂಧವಿದ್ದು ನ . ಪಂ. ಮುಖ್ಯಾಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಆದೇಶ ನೀಡಲಾಗಿದೆ.
ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ .
ಇಂದು ನಡೆದ ಸಭೆಯಲ್ಲಿ ಪುತ್ತೂರು ಉಪವಿಭಾಗ ಕೋವಿಡ್ 19 ನೋಡೆಲ್ ಅಧಿಕಾರಿ ರಾಜು ಮೊಗವೀರ ಕೆ . ಎ . ಎಸ್ . ಹಿ . ಶ್ರೇ , ರಾಹುಲ್ ಶಿಂಧೆ ಐ . ಎ . ಎಸ್ . , ಉಳ್ಳಾಲ್, ತಹಶೀಲ್ದಾರ್ ಅನಂತ ಶಂಕರ್ , ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, ಎಲ್ಲಾ ಪ್ಲೇಯಿಂಗ್ ಪ್ಯಾಡ್ ಅಧಿಕಾರಿಗಳು ಇದ್ದರು.