ಬದುಕು ಬದಲಿಸೋಣ-ಭಾಗ 2

ಬದುಕು ಎಷ್ಟು ದುಸ್ತರ ಬಂದಿದೆ ಅಂದರೆ ನಮ್ಮವರನ್ನೇ ನಾವು ನಂಬದಂತಹ ಸ್ಥಿತಿ.

ಭಾರತ ಭಾವೈಕತೆ ತವರು ಅನ್ನಲು ಹಲವಾರು ಕಾರಣ ಕೊಡಬಹುದು.

ಸಂತ ಶಿಶುನಾಳ ಶರೀಫರು ಗೋವಿಂದಭಟ್ಟರು ಡಾ.ಎಪಿಜೆ ಅಬ್ದುಲ್ ಕಲಾಂ,ಅಟಲ್ ಬಿಹಾರಿ ವಾಜಪೇಯಿ ನಾವು ಕಂಡತಂಹ ಭಾವೈಕತೆ ಹರಿಕಾರರು… ಬಿಜಾಪುರ ಸಿದ್ದೇಶ್ವರ ಸ್ವಾಮಿಗಳು, ಬಿಜಾಪುರದ ಇಬ್ರಾಹಿಂ ಸುತಾರ ನಾನರವರು..ಗದುಗಿನ ಶಿರಹಟ್ಟಿ ಸ್ವಾಮೀಜಿಗಳು…

ಏಕೆ ಇದನ್ನು ಹೇಳುತ್ತಿದ್ದಿನಿ ಅಂದರೆ…ಇತ್ತಿಚಿನ ದಿನಗಳಲ್ಲಿ ನಮ್ಮ ರಕ್ಷಣೆ ಬಂದಂತಹ ಡಾಕ್ಟರ್, ನ‌ರ್ಸ್‌ಗ ಳು,ಆಶಾಕಾರ್ಯಕರ್ತರು ,ಆರಕ್ಷಕರು ಮೇಲೆ ಹಲ್ಲೆ ಮಾಡುತ್ತಿರುವುದು ಬಹಳ ಖಂಡನಿಯ.

ನಮ್ಮ ಕುಟುಂಬದ ರಕ್ಷಣೆ ತಮ್ಮ ಕುಟುಂಬ ಲೆಕ್ಕಿಸದೇ ಬಂದಂತಹ ಅಂತ ವ್ಯಕಿಗಳ ಮೇಲೆ ಹಲ್ಲೆ ಮಾಡುವುದು, ನಾವು ಕುಂತ ಮರದ ಕೊಂಬೆಗೆ ಕೊಡಲಿಯಿಂದ ಹೊಡೆದಂತೆ.

ಏಕೆ ಭಾರತದಲ್ಲಿ ಇತಂಹ ಪರಿಸ್ಥಿತಿ. ಯಾವುದೇ ಧರ್ಮದವರು ದಯಮಾಡಿ ನಿಮ್ಮ ಧರ್ಮ ಪಾಲನೆ ಮನೆಯಲ್ಲಿ ಮಾಡಿ. ಜಗತ್ತು ಹೊತ್ರಿ ಉರಿಯುತ್ತಿದೆ.

ಇಂತಹ ಸಂದರ್ಭದಲ್ಲಿ ನಮ್ಮ ನಿಮ್ಮ ಎಲ್ಲರ ಸಹಕಾರ ಇಲ್ಲದೇ ಹೋದರೆ ನಮ್ಮನ್ನು ನಾವೇ ಕೊಂದುಕೋಂಡಂತೆ ದಯವಿಟ್ಟು ಎಚ್ಚರಗೊಳ್ಳಿ ಇದು ಕಟ್ಟೆಚ್ಚರ ಗೊಳ್ಳುವ ಸಂದರ್ಭ. ಒಬ್ಬ ವ್ಯಕ್ತಿ ಮಾಡಿದರೆ ಅದು ಆ ಪೂರ್ಣ ಧರ್ಮ ಕಪ್ಪು ಚುಕ್ಕೆ.

ಒಂದೇ ತಾಯಿ ಮಕ್ಕಳಂತೆ ನಾವು, ಭಾರತಾಂಬೆ ಮಕ್ಕಳು. ದಯವಿಟ್ಟು ಮನಸ್ಸುಗಳನ್ನು ತಿದ್ದು ಕೋಳ್ಳಣೋ ಬನ್ನಿ ಹೊಸ ಸಂವತ್ಸರ ಬರೆಯೋಣ ಬದಲಾವಣೆ ಮೊದಲ ಹಜ್ಜೆ ನಮ್ಮದಾಗಲಿ.

-ಸಿ.ಬಿ.ಗೂಳರಡ್ಡಿ ವಕೀಲರು ,ಹಾಗೂ ಅಧ್ಯಕ್ಷರು ಸರ್ವಧರ್ಮ ಹಿತೈಷಿ ಸೇವಾ ಸಂಘ ಗದಗ ೯೧೬೪೪೭೦೦೦೫

Leave A Reply

Your email address will not be published.