ಸುಳ್ಯದಲ್ಲಿ ಸ್ವಂತ ಖರ್ಚಿನಲ್ಲಿ ದಿನ ಬಳಕೆ ವಸ್ತು ವಿತರಿಸಿದ ಜಾಹ್ನವಿ ಕಾಂಚೋಡು

Share the Article

ಜಿಲ್ಲೆಯಲ್ಲಿ ಕೊರೊನಾ ಕೇಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿದಿದ್ದು, ಬಡ ಕುಟುಂಬಗಳು‌ ಹಸಿವಿನಿಂದ ಕಂಗೆಟ್ಟಿವೆ. ಬಾಳಿಲದಲ್ಲಿ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ ಸುಳ್ಯ ತಾಲೂಕು ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಐದು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ್ದಾರೆ.

ಕಳಂಜ ಪಂಚಾಯತ್ ವ್ಯಾಪ್ತಿಯಲ್ಲಿನ ಐದು ಬಡಕುಟುಂಬಗಳಿಗೆ 10 ಕೆಜಿ ಅಕ್ಕಿ, ಸಕ್ಕರೆ, ಚಾ ಪುಡಿ, ಬೆಲ್ಲ, ಮೆಣಸು, ತೊಗರಿಬೇಳೆ ಸೇರಿದಂತೆ ಅಗತ್ಯ ವಸ್ತುಗಳ‌ ಕಿಟ್ಟನ್ನು ಸ್ವಂತ ಖರ್ಚಿನಲ್ಲಿ ವಿತರಿಸಿದರು.

ಸರಕಾರದ ಸಹಾಯ ಹಸ್ತ ಬರುತ್ತಿದ್ದರೂ, ಅದರ ಜತೆಗೆ ತಾವೇ ಸ್ವತಃ ವಿತರಿಸಿ ಸಹಾಯ ಹಸ್ತ ಚಾಚಿದ್ದಾರೆ.

Leave A Reply

Your email address will not be published.