ಸುಳ್ಯ | ಒಟಿಪಿ ಇಲ್ಲದೆ ಪಡಿತರ ವಿತರಣೆ | ಗ್ರಾಹಕರಿಗೆ ನಿರಾತಂಕ

Share the Article

ಕೇವಲ ಎರಡು ದಿನಗಳ ಹಿಂದಷ್ಟೇ, ನಾವು ಕೋಟ ಶ್ರೀನಿವಾಸ್ ಪೂಜಾರಿ ಮಾತಿಗೂ ಬೆಲೆಯಿಲ್ಲ ಎಂಬ ವರದಿ ಮಾಡಿದ್ದೆವು. ಈಗ ಜನರಿಗೆ ಸ್ಪಂದನೆ ಸಿಕ್ಕಿದೆ.

ಸುಳ್ಯ ತಾಲೂಕಿನಲ್ಲಿ ಒ. ಟಿ. ಪಿ. ರದ್ದುಗೊಳಿಸಿ ಇಂದು ಪಡಿತರ ವಿತರಿಸಲಾಗಿದ್ದು , ತಾಲೂಕಿನ 62 ನ್ಯಾಯ ಬೆಲೆ ಅಂಗಡಿಗಳ ಮೂಲಕ 2250 ಕುಟುಂಬ ಗಳಿಗೆ ಪಡಿತರ ವಿತರಿಸಲಾಗಿದೆ ‘ ಎಂದು ಪುತ್ತೂರು ಸಹಾಯಕ ಕಮಿಷನರ್‌ ಡಾ. ಯತೀಶ್ ಉಳ್ಳಾಲ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಇಂದು ಸಂಜೆ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

“ ಮುಖ್ಯ ಉಗ್ರಾಣದಿಂದ ಎಲ್ಲಾ ಅಂಗಡಿಗಳಿಗೂ ತಕ್ಷಣ ದಾಸ್ತಾನು ಸರಬರಾಜು ಮಾಡಲಾಗುವುದು. ದಾಸ್ತಾನಿನಲ್ಲಿ ಯಾವುದೇ ಕೊರತೆ ಇಲ್ಲ. ನಗರ ಸಭೆಯ ವ್ಯಾಪ್ತಿಯಲ್ಲಿ ತಳ್ಳು ಗಾಡಿ, ಬೀದಿ ವ್ಯಾಪಾರಿ ಗಳಿಗೆ ನಿರ್ಬಂಧವಿದ್ದು ನ . ಪಂ. ಮುಖ್ಯಾಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಆದೇಶ ನೀಡಲಾಗಿದೆ.

ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ .
ಇಂದು ನಡೆದ ಸಭೆಯಲ್ಲಿ ಪುತ್ತೂರು ಉಪವಿಭಾಗ ಕೋವಿಡ್ 19 ನೋಡೆಲ್ ಅಧಿಕಾರಿ ರಾಜು ಮೊಗವೀರ ಕೆ . ಎ . ಎಸ್ . ಹಿ . ಶ್ರೇ , ರಾಹುಲ್ ಶಿಂಧೆ ಐ . ಎ . ಎಸ್ . , ಉಳ್ಳಾಲ್, ತಹಶೀಲ್ದಾರ್ ಅನಂತ ಶಂಕರ್ , ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, ಎಲ್ಲಾ ಪ್ಲೇಯಿಂಗ್ ಪ್ಯಾಡ್ ಅಧಿಕಾರಿಗಳು ಇದ್ದರು.

Leave A Reply

Your email address will not be published.