ಮುಸ್ಲಿಂ ಮತೀಯವಾದಿಗಳು ಏನೋ ಷಡ್ಯಂತ್ರ ನಡೆಸುತ್ತಿರುವ ಗುಮಾನಿ,ತನಿಖೆ ನಡೆಸಿ – ಮುರಳಿಕೃಷ್ಣ ಹಸಂತ್ತಡ್ಕ
ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ವೈದ್ಯರ, ವೈದ್ಯಕೀಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದೇಶಕ್ಕೆ ದೇಶವೇ ಸರಕಾರಕ್ಕೆ ತಲೆಬಾಗಿ, ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅನ್ನು ಪಾಲಿಸುತ್ತಿರುವಾಗ ದೆಹಲಿ ಮತ್ತು ಇತರೆಡೆ ಅಕ್ರಮವಾಗಿ ಜನ ಸೇರುವ ಬಗ್ಗೆ ಗುಮಾನಿ ಮೂಡಿದೆ. ಈ ಬಗ್ಗೆ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಇದರ ಸಂಚಾಲಕರಾದ ಮುರಳಿಕೃಷ್ಣ ಹಸಂತ್ತಡ್ಕ ಅವರು ಆತಂಕಿತರಾಗಿ ಸರಕಾರವನ್ನು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಇಡೀ ದೇಶ ಕೋರೋನಾದ ವಿರುದ್ಧ ಹೋರಾಡುತ್ತಿರುವಾಗ ಒಂದಷ್ಟು ಮತೀಯವಾದಿಗಳು ದೆಹಲಿಯ ನಿಜಾಮುದ್ದಿನ್ ಪ್ರದೇಶದ ಮಸೀದಿಯಲ್ಲಿ ಸರಕಾರದ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಧಾರ್ಮಿಕ ಸಭೆ ನಡೆಸಿ ಇಡೀ ದೇಶದಲ್ಲಿ ಕೋರೋನಾ ವೈರಸನ್ನು ಹಬ್ಬಿಸಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ.
ಅದರ ಜೋತೆಗೆ ಬೆಂಗಳೂರು ಹಾಗೂ ದೇಶದ ಹಲವು ಭಾಗಗಳಲ್ಲಿ ನಮ್ಮ ಅರೋಗ್ಯದ ದೃಷ್ಟಿಯಿಂದ ಹಲವು ದಿನಗಳಿಂದ ಕೆಲಸ ಮಾಡುತ್ತಿರುವ ಅರೋಗ್ಯ ಸಿಬ್ಬಂದಿ ಮೇಲೆ ಮತೀಯ ದಾಂಧಲೆ ನಡೆಸುತ್ತಿರುವುದು ಕಾಣುತ್ತಿದೆ. ಇದನ್ನೆಲ್ಲ ನೋಡಿ ದೇಶದ ಜನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೂ, ಇಂತಹ ಘಟನೆಗಳ ಹಿಂದೆ ಏನೋ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಸಂಶಯವಿದ್ದು ದೇಶದ ಎಲ್ಲಾ ಮಸೀದಿಗಳ ಮೇಲೆ ಹಾಗೂ ಕೆಲವು ಕಡೆಗಳಲ್ಲಿ ಸರಕಾರದ ಲಾಕ್ ಡೌನ್ ಆದೇಶ ಮೀರಿ ಮಸೀದಿಗಳಲ್ಲಿ ಜನ ಸೇರುತ್ತಿದ್ದು ಇದರ ಬಗ್ಗೆ ನಿಗಾ ಇಡಬೇಕೇಂದು ಸರಕಾರವನ್ನು ಅಗ್ರಹಿಸುತ್ತೇವೆ.
ಮುರಳಿಕೃಷ್ಣ ಹಸಂತ್ತಡ್ಕ, ಬಜರಂಗದಳ ಪ್ರಾಂತ ಸಹ ಸಂಚಾಲಕ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ