D K Shivkumar : ಡಿಕೆಶಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಗೆ ಬಂದ ಬಿಜೆಪಿಯ ಇಬ್ಬರು ಶಾಸಕರು!!

D K Shivkumar : ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಾನು ಕೆಪಿಸಿಸಿ ಅಧ್ಯಕ್ಷನಾಗಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಔತಣಕೂಟವನ್ನು ಏರ್ಪಡಿಸಿದ್ದಾರೆ. ಅಚ್ಚರಿಯೇನೆಂದರೆ ಡಿಕೆಶಿ ಆಯೋಜಿಸಿದ್ದ ಈ ಡಿನ್ನರ್ ಪಾರ್ಟಿಗೆ ಬಿಜೆಪಿಯ ಇಬ್ಬರು ಶಾಸಕರು ಕೂಡ ಆಗಮಿಸಿದ್ದಾರೆ.

ಹೌದು, ಡಿಕೆಶಿ(D K Shivkumar) ಆಯೋಜಿಸಿದ್ದ ಈ ಡಿನ್ನರ್ ಪಾರ್ಟಿಯಲ್ಲಿ ಕೇವಲ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಮಾತ್ರವಲ್ಲದೇ ಇಬ್ಬರೂ ಬಿಜೆಪಿ ನಾಯಕರು ಭಾಗಿಯಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಕಾಂಗ್ರೆಸ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಂತ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಕೂಡ ಈ ಡಿನ್ನರ್ ಪಾರ್ಟಿಗೆ ಆಗಮಿಸುವ ಮೂಲಕ ಬಿಜೆಪಿಗೆ ಪ್ರತ್ಯಕ್ಷ ಸಂದೇಶ ರವಾನಿಸಿದ್ದಾರೆ.

ಇನ್ನೂ ಡಿನ್ನರ್ ಪಾರ್ಟಿ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಇದು ನನ್ನ ಬದುಕಿನ ಮಹತ್ವದ ಕ್ಷಣ. ಕೆಪಿಸಿಸಿ ಅಧ್ಯಕ್ಷನಾಗಿ 5 ವರ್ಷಗಳು ತುಂಬಿದೆ. ಈ ಸುಧೀರ್ಘ ಪ್ರಯಾಣದಲ್ಲಿ ಜೊತೆಯಾದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Comments are closed.