Murder Mystery: ಸರಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಪತ್ನಿ!

Murder Mystery: ತೆಲಂಗಾಣದ ನಲ್ಗೊಂಡದ ಉಸ್ಮಾನಪುರದಲ್ಲಿ ಸರಕಾರಿ ಕೆಲಸಕ್ಕಾಗಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿರುವ ಕುರಿತು ವರದಿಯಾಗಿದೆ. ಕುಡಿತದ ಚಟವಿದ್ದ ಪತಿಯನ್ನು ತಾನೇ ಕೊಂದು ಸಹಜ ಸಾವಿನ ರೀತಿ ಬಿಂಬಿಸಿ, ನಂತರ ಪೊಲೀಸ್ ತನಿಖೆಯ ಸಮಯದಲ್ಲಿ ಕೊಲೆ ರಹಸ್ಯ ಬಟಾ ಬಯಲಾಗಿದೆ.
ಮಹಿಳೆ ತನಗಲ್ಲದಿದ್ದರೂ ಮಕ್ಕಳಿಗಾದರೂ ಸರಕಾರಿ ಉದ್ಯೋಗ ಸಿಗಬಹುದು ಎನ್ನುವ ಆಸೆ ಬಿದ್ದು ಗಂಡನನ್ನು ಕೊಲೆ ಮಾಡಿದ್ದಾಳೆ. ಉಸ್ಮಾನಪುರ ನಿವಾಸಿ ಖಲೀಲ್ ಹುಸೇನ್ (44) ಕಣಗಲ್ ಮಂಡಲದ ಚಾರ್ಲಗೌರರಂ ಸರಕಾರಿ ಪ್ರೌಢಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಸ್ವಲ್ಪ ಮಾನಸಿಕ ಕಾಯಿಲೆ ಇದ್ದ ಈತ ಕುಡಿತದ ದಾಸನಾಗಿದ್ದ. ಈತನ ಮದ್ಯದ ಚಟದಿಂದ ಬೇಸತ್ತ ಹೆಂಡತಿ ಕೆಲಸದ ಆಸೆಗೆ ಗಂಡನನ್ನೇ ಕೊಲೆ ಮಾಡಿದ್ದಾಳೆ.
ಮೃತ ವ್ಯಕ್ತಿಯ ತಾಯಿ ಮೊಹಮ್ಮದ್ ಬೇಗಂ ತಮ್ಮ ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದಾಗ, ಅದೇ ದಿನ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈ ತಿಂಗಳ 7 ನೇ ತಾರೀಕಿನಂದು ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಅದರಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಕಾರಣ ಸಾವು ಸಂಭವಿಸಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಿಜ ವಿಷಯ ಹೇಳಿದ್ದಾಳೆ.
Comments are closed.