ಪ್ರಧಾನಿ ಮೋದಿ ತಮ್ಮಸಂದೇಶದಲ್ಲಿ ಏನು ಹೇಳಿದರು ಗೊತ್ತಾ ? | ವಿಡಿಯೋ ಸಹಿತ

ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಜಾಗೃತಿಗಾಗಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಸಂದೇಶ -ಸಾರಾಂಶ.

ಮತ್ತೆ ಮೂರನೆಯ ಬಾರಿ ಪ್ರಧಾನಿ ಮೋದಿಯವರು ಜನತೆಯ ಮುಂದೆ ಬಂದಿದ್ದಾರೆ. ದೇಶದಲ್ಲಿ ಮಾರಕ ಸೋಂಕು ಹರಡಲು ಆರಂಭವಾದ ದಿನದಿಂದ ಈವರೆಗೆ ಪ್ರಧಾನಿ ಮೋದಿ ಅವರು ಎರಡು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೊದಲ ಸಲ ಸಾಂಕೇತಿಕ ಲಾಕ್ ಡೌನ್ ಆದ ಜನತಾ ಕರ್ಫ್ಯು ಮಾಡುವಂತೆ ಕೇಳಿಕೊಂಡಿದ್ದರು. ಎರಡನೆಯ ಬಾರಿ ಕೊರೋನಾ ವೈರಸ್​ ನಿಯಂತ್ರಣಕ್ಕಾಗಿ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್ ಮಾಡಿ ಆದೇಶ ಹೊರಡಿಸಿದ್ದರು.

ಇವತ್ತಿನ, ಮೂರನೆಯ ಕೋರೋನಾ ಸಂದೇಶದ ಸಾರಾಂಶ

ಈಗ ದೇಶವ್ಯಾಪಿ ಲಾಕ್ ಡೌನ್ ಗೆ 9 ದಿನ ಆಗಿದೆ. ಇದು ಐತಿಹಾಸಿಕ ಮತ್ತು ಅಭೂತಪೂರ್ವ. ನಿಮಗೆ ಅನ್ನಿಸಬಹುದು, ನಾನು ಮನೆಯಲಿದ್ದು ಒಂದು ವ್ಯಕ್ತಿ ಏನು ಮಾಡಬಹುದು. ಇದು ನೀವೊಬ್ಬರೇ ಅಲ್ಲ ಇಲ್ಲಿರುವುದು. ಒಬ್ಬೊಬ್ಬ ವ್ಯಕ್ತಿ ಸೇರಿ ಒಟ್ಟು 130 ಕೋಟಿ ಜನರ ವಿರಾಟ್ ಜನರ ಶಕ್ತಿ ಇದೆ.

ಭಾರತ ಈ ಪರಿಯಾಗಿ ಲಾಕ್ ಡೌನ್ ಗೆ ಸ್ಪಂದಿಸಿದ್ದನ್ನು ಇಡೀ ಪ್ರಪಂಚ ಗಮನಿಸಿದೆ. ನಿಮ್ಮಿಂದ ಇಡೀ ಮನುಷ್ಯ ಕುಲವೇ ಸ್ಫೂರ್ತಿ ಹೊಂದಿದೆ. ನಾವು ಮನೆಯಲ್ಲಿಯೇ ಇದ್ದು ಜಗತ್ತಿಗೆ ಹಾಗೆ ಮಾಡುವಂತೆ ತೋರಿಸಿಕೊಟ್ಟಿದ್ದೇವೆ.

ನನಗೆ ನಿಮ್ಮ 9 ನಿಮಿಷ ಬೇಕು. ಇದೇ ಏಪ್ರಿಲ್ 5, ಭಾನುವಾರ 130 ಕೋಟಿ ಜನರ ವಿರಾಟ್ ಶಕ್ತಿಯನ್ನು ತೋರಿಸಬೇಕಾಗಿದೆ. ಅವತ್ತು ಮನೆಯಲ್ಲಿ ಲೈಟ್ ಬಂದ್ ಮಾಡಿ. ಮನೆಯ ಬಾಗಿಲಲ್ಲಿ, ಕಿಟಕಿಯಲ್ಲಿ, ಬಾಲ್ಕನಿಯಲ್ಲಿ ಮೊ೦ಬತ್ತಿ ಹೊತ್ತಿಸಿ, ಟಾರ್ಚ್ ಬೆಳಗಿಸಿ. ಮೊಬೈಲ್ ಟಾರ್ಚು ಕೂಡ ಆಗತ್ತೆ. ಮನೆಯಿಂದ ಹೊರಗಡೆ ಹೋಗದೆ ಇದೆಲ್ಲವನ್ನು ಮಾಡಿ.

ಎಲ್ಲವನ್ನು ಸಾಮಾಜಿಕ ಅಂತರ ಇಟ್ಟುಕೊಂಡು ಮಾಡಿ. ಮನೆಯಿಂದ ಹೊರಬರದೆ ಮಾಡಿ. ಒಟ್ಟು 130 ಕೋಟಿ ಜನರ ಶಕ್ತಿ ಒಟ್ಟಾಗಿ ಬೆಳಗಲಿ. 130 ಕೋಟಿ ಒಗ್ಗಟ್ಟು ಮೊಳಗಲಿ. ಒಗ್ಗಟ್ಟು ಪ್ರದರ್ಶನ ಆಗಲಿ. ಕೊರೋನಾ ವಿರುದ್ಧ ಹೊರಡೋಣ. ಜತೆಯಾಗಿ ನಮ್ಮ ಯುದ್ಹ ಸಾರೋಣ.

ಇದೊಂದು ಸಾಂಕೇತಿಕವಾಗಿ, ಜನರನ್ನು ಜಾತಿ ಮತ ಪಂಥ, ಪಕ್ಷ ಭೇದವಿಲ್ಲದೆ, ಕೊರೋನಾ ವಿರುದ್ಧದ ಹೋರಾಟದತ್ತ ತಿರುಗಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನ. ಲಾಕ್ ಡೌನ್ ಮುಂದುವರೆಯುತ್ತದೆ. ಮತ್ತಷ್ಟು ಸ್ಟ್ರಿಕ್ಟ್ ಮಾಡುತ್ತಾರೆ, ಮಿಲಿಟರಿ ಬರುತ್ತದೆ. ಜೈಲು ಶಿಕ್ಷೆ ಘೋಷಿಸುತ್ತಾರೆ. ಹೀಗೆ ಬರುತ್ತಿದ್ದ ಊಹಾಪೋಹಗಳಿಗೆ ಕೊನೆಮೊದಲಿಲ್ಲ. ಎಲ್ಲದಕ್ಕೂ ಪ್ರಧಾನಿಯವರು ತೆರೆ ಎಳೆದಿದ್ದಾರೆ. ಎಲ್ಲರನ್ನೂ ಓರಿಯೆಂಟೇಷನ್ ಮಾಡುವತ್ತ ಮೋದಿಯ ಚಿತ್ತ.

Leave A Reply

Your email address will not be published.