ದುಬೈಯಿಂದ ಬಂದ ಸುಳ್ಯದ ವ್ಯಕ್ತಿಗೆ ಕೊರೊನಾ ಸೋಂಕು ದೃಢ

ಜಗತ್ತಿನಾದ್ಯಂತ ವ್ಯಾಪಿಸಿದ್ದ ಕೊರೋನಾ ಸೋಂಕು ಇದೀಗ ಸುಳ್ಯದಲ್ಲೂ ಕಾಣಿಸಿಕೊಂಡಿದೆ. ಅಜ್ಜಾವರ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಮಾ. 17 ರಂದು ದುಬೈಯಿಂದ ಬಂದಿದ್ದ ಅಜ್ಜಾವರದ ವ್ಯಕ್ತಿ ಯೊಒ್ಬರನ್ನು ಐಸೋಲೇಶನ್ ವಾರ್ಡ್ ನಲ್ಲಿಟ್ಟು, ಅವರ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು.

ಇದೀಗ ಪರೀಕ್ಷೆಯ ವರದಿ ಬಂದಿದ್ದು ಪೊಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ. ಸುಳ್ಯ ಆಸ್ಪತ್ರೆಯಲ್ಲಿದ್ದ ಈ ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !

Leave A Reply

Your email address will not be published.