Day: March 26, 2020

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಿ.ಎಂ.ಓ ಡಾ.ರಾಜೇಶ್ವರಿದೇವಿ ವರ್ಗಾವಣೆ

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಿ.ಎಂ.ಓ ಡಾ.ರಾಜೇಶ್ವರಿದೇವಿ ವರ್ಗಾವಣೆ ಮಾಡಲಾಗಿದ್ದು, ನೂತನ ಡಿ.ಎಂ.ಓ. ಆಗಿ ಡಾ.‌ಸದಾಶಿವ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡದೇ ಇರುವುದು ಹಾಗೂ ಇತರ ಅವ್ಯವಸ್ಥೆ ಕುರಿತು ಮಾಧ್ಯಮದಲ್ಲಿ ಸಚಿತ್ರ ವರದಿ ಪ್ರಕಟವಾಗಿತ್ತು.ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಯ ಅವ್ಯವಸ್ಥೆ ಕುರಿತಾದ ಆಡಿಯೋವೈರಲ್ ಆಗಿತ್ತು. ಇದೀಗ ಡಾ.ರಾಜೇಶ್ವರಿ ಅವರನ್ನು ಬಂಟ್ವಾಳ ತಾಲೂಕು ಆಡಳಿತ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ.

ಸೂಪರ್ ಮಾರ್ಕೆಟ್ ಗಳನ್ನು 24 x 7 ತೆರೆಯುವ ಹಿಂದೆ ಕಮಿಷನರ್ ಕೈವಾಡ | ಡಿಸಿಎಂ ಅಶ್ವಥ್ ನಾರಾಯಣ್ ನೇರ ಆರೋಪ

ಬೆಂಗಳೂರು, ಮಾ. 26 : ದಿನ ಬಳಕೆಯ ಅಗತ್ಯ ವಸ್ತುಗಳಿಗೆ ಜನರು ಮುಗಿ ಬೀಳುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿಗಳನ್ನು ಓಪನ್ ಮಾಡುವುದಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನುಮತಿ ನೀಡಿದ್ದರು. ದಿನದ 24 ಗಂಟೆ ಸೂಪರ್ ಮಾರ್ಕೆಟ್ ಗಳನ್ನು ತೆರೆದಿಟ್ಟರೆ ಪ್ರತಿಯೊಬ್ಬರು ನಾಳೆ ಬೀದಿಯಲ್ಲಿ ಇರುತ್ತಾರೆ. ಜನರು ಕೈಯಲ್ಲೊಂದು ಬ್ಯಾಗ್ ಹಿಡಿದುಕೊಂಡರೆ ಅವರನ್ನು ಪೊಲೀಸರು ಕೂಡ ಕೇಳುವಂತಿಲ್ಲ. ಸರಕಾರ ಸುಯಿಸೈಡಲ್ ನಡೆ ಇಟ್ಟಿದೆ. ಈ ಪ್ಲಾನು ವರ್ಕ್ ಔಟ್ …

ಸೂಪರ್ ಮಾರ್ಕೆಟ್ ಗಳನ್ನು 24 x 7 ತೆರೆಯುವ ಹಿಂದೆ ಕಮಿಷನರ್ ಕೈವಾಡ | ಡಿಸಿಎಂ ಅಶ್ವಥ್ ನಾರಾಯಣ್ ನೇರ ಆರೋಪ Read More »

ಶ್ರೀ ಕ್ಷೇತ್ರ ಕೆಮ್ಮಲೆ ಬ್ರಹ್ಮಕಲಶೋತ್ಸವ ಮುಂದೂಡಿಕೆ

ವಿಶ್ವದಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನ ರೋಗದ ನಿಯಂತ್ರಣ ಕ್ಕೆ ಸರಕಾರ ನೀಡಿರುವ ಆದೇಶವನ್ನು ಪಾಲಿಸುವ ಹಿನ್ನೆಲೆಯಲ್ಲಿ, ದಿನಾಂಕ 1 , 2 , 3 ಏಪ್ರಿಲ್ 2020 ನಿಗದಿಯಾಗಿದ್ದ ಶೀ ಕ್ಷೇತ್ರ ಕೆಮ್ಮಲೆಯ ಬ್ರಹ್ಮಕಲಶೋತ್ಸವವನ್ನು ಮುಂದೂಡಲಾಗಿದೆ. ಮುಂದಿನ ಬ್ರಹ್ಮಕಶೋತ್ಸವದ ದಿನಾಂಕವನ್ನು ಕ್ಷೇತ್ರದ ಆಡಳಿತ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯು ನಿಗದಿ ಮಾಡಿ ಭಕ್ತಾದಿಗಳಿಗೆ ತಿಳಿಸಾಗುವುದು. ಕ್ಷೇತ್ರದ ಭಕ್ತಾದಿ ಗಳು ಸಹಕರಿಸುವಂತ ಆಡಳಿತ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಕ್ಷೇತ್ರ ಕೆಮ್ಮಲೆ ಪ್ರಕಟಣೆ ತಿಳಿಸಿದೆ.

ಸವಣೂರು ಗ್ರಾ.ಪಂ| ಗ್ರಾಮೀಣ ಕಾರ್ಯಪಡೆ ರಚನೆ

ಸವಣೂರು ಗ್ರಾಮ ಪಂಚಾಯತ್ ನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಮೀಣ ಕಾರ್ಯಪಡೆ ರಚನೆ ಸಭೆ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರ ಉಪಸ್ಥಿತಿಯಲ್ಲಿ ಮಾ.26ರಂದು ನಡೆಯಿತು. ಈ ತಂಡದಲ್ಲಿ ಪಂಚಾಯತ್ ಅಧ್ಯಕ್ಷರು ,ಉಪಾಧ್ಯಕ್ಷರು ,ಪಂಚಾಯತ್ ಸದಸ್ಯರುಗಳು ,ಗ್ರಾಮ ಲೆಕ್ಕಾಧಿಕಾರಿಗಳು,ಬೀಟ್ ಪೊಲೀಸ್,ಅಶಾಕಾರ್ಯಕರ್ತೆಯರು,ಅಂಗನವಾಡಿ ಶಿಕ್ಷಕಿಯರು,ವೈದ್ಯಾಧಿಕಾರಿ,ಆರೋಗ್ಯ ಸಿಬ್ಬಂದಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳನ್ನೊಳಗೊಂಡ ತಂಡ ರಚನೆಯಾಗಿದೆ.

ಬೆಳ್ಳಾರೆ ಗ್ರಾ.ಪಂ | ಅತ್ಯವಶ್ಯಕ ವಸ್ತುಗಳನ್ನು ಕೊಂಡುಹೋಗಬೇಕಾದರೆ ಈ ನಿಯಮಗಳನ್ನು ಪಾಲಿಸಿ

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಳೆ ಮಾರ್ಚ್ 27 ರಿಂದ ಅತ್ಯವಶ್ಯಕ ವಸ್ತುಗಳನ್ನು ಕೊಂಡೊಯ್ಯುವಿರೆ ಹಾಗಾದರೆ ಮುಂದಿನ ಆದೇಶದವರೆಗೆ ಈ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಿರಿ_ ಕರೋನಾ ವೈರಸ್ ಮುಂಜಾಗ್ರತವಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ಕಟ್ಟುನಿಟ್ಟಾದ ಆದೇಶಗಳನ್ನ ಹೊರಡಿಸಲಾಗಿದೆ. ವಿಶೇಷವಾಗಿ ನಾಳೆಯಿಂದ (ಮಾರ್ಚ್ 27 ರಿಂದ) ಬೆಳ್ಳಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ *ಅತ್ಯವಶ್ಯಕವಾಗಿ ಬೇಕಾದ ಮೆಡಿಕಲ್ ,ಹಾಲು ,ದಿನಸಿ ,ತರಕಾರಿ* ಗಳನ್ನ ಕೊಂಡುಕೊಳ್ಳುವಿರಾದರೆ ಈ ಕೆಳಗೆ ತಿಳಿಸಿದ ನಿಯಮಗಳನ್ನ ಕಟ್ಟು ನಿಟ್ಟಾಗಿ ಮುಂದಿನ ಆದೇಶ ಬರುವವರೆಗೆ ಪಾಲಿಸಬೇಕಿದೆ._ [ *ವಿ.ಸೂ* …

ಬೆಳ್ಳಾರೆ ಗ್ರಾ.ಪಂ | ಅತ್ಯವಶ್ಯಕ ವಸ್ತುಗಳನ್ನು ಕೊಂಡುಹೋಗಬೇಕಾದರೆ ಈ ನಿಯಮಗಳನ್ನು ಪಾಲಿಸಿ Read More »

ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಗೆಳೆಯರೊಂದಿಗೆ ನದಿಗೆ ಇಳಿದ ವ್ಯಕ್ತಿ ನೀರುಪಾಲು

ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಗೆಳೆಯರೊಂದಿಗೆ ನದಿಗೆ ಇಳಿದ ಪಾಲ್ಕೆ ನಿವಾಸಿ ರಹೀಮ್ ನೀರು ಪಾಲಾಗಿದ್ದಾರೆ. ನಾಲ್ವರು ಗೆಳೆಯರು ಮಾಣಿ ಬಳಿ ನೇತ್ರಾವತಿಯ ನದಿ ದಡಕ್ಕೆ ತೆರಳಿದ್ದರು. ಆ ಸ್ನೇಹಿತರಲ್ಲಿ ರಹೀಮ್ ಕೂಡ ಒಬ್ಬನಾಗಿದ್ದ. ಮೊದಲು ಉಳಿದ ಮೂರು ಸ್ನೇಹಿತರುಗಳು ನದಿಗೆ ಸ್ನಾನಕ್ಕೆಂದು ಇಳಿದಿದ್ದರು. ಆನಂತರ ರಹೀಂ ಕಣಕ್ಕೆ ಇಳಿದಿದ್ದ. ಆತ ಸ್ನಾನ ಮಾಡುತ್ತಾ ಮಾಡುತ್ತಾ ನದಿಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಿದ್ದ. ಆಗ ನೀರಿನಲ್ಲಿ ಮುಳುಗುವ ಸಂದರ್ಭದಲ್ಲಿ ಕಾಪಾಡುವಂತೆ ಗೆಳೆಯರನ್ನು ಕೂಗಿಕೊಂಡ. ಆದರೆ ಗೆಳೆಯರು ಅಸಹಾಯಕರಾಗಿದ್ದರು. ಅವರ್ಯಾರಿಗೂ …

ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಗೆಳೆಯರೊಂದಿಗೆ ನದಿಗೆ ಇಳಿದ ವ್ಯಕ್ತಿ ನೀರುಪಾಲು Read More »

ಕುಮಾರದಾರ ನದಿತಟದಿ ಜುಗಾರಿ ಅಡ್ಡೆ | ಕಡಬ ಪೊಲೀಸರಿಂದ ದಾಳಿ

ಕಡಬ: ಕೊಯಿಲ‌ ಗ್ರಾಮದ ಒಳಕಡಮ ಬೊಳ್ಳೆಚ್ಚಿ ಕುಮಾರಧಾರ ನದಿ ದಡದಲ್ಲಿ ಜುಗಾರಿ ಅಡ್ಡೆಗೆ ಕಡಬ ಎಸೈ ರುಕ್ಮಯ್ಯ ನಾಯ್ಕ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿ ಆಟಕ್ಕೆ ಬಳಸಿದ ರೂ.730 ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿ ನಿವಾಸಿ ಮಹಮ್ಮದ್ ಯೂನುಸ್, ಇಬ್ರಾಹಿಂ,ಹಿರೇಬಂಡಾಡಿ ಗ್ರಾಮದ ಮರದಮೇಲು ನಿವಾಸಿ ಸಂಶುದ್ದೀನ್,ಸಲೀಂ ಬೊಳ್ಳಮೆ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಬೀಟ್ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹರೀಶ್ ,ಮಹೇಶ್, ಭವಿತ್ ರೈ,ಶ್ರೀ ಶೈಲ‌ ಪಾಲ್ಗೊಂಡಿದ್ದರು.

ನೂಜಿಬಾಳ್ತಿಲ ಗ್ರಾ.ಪಂ | ಜಾಗೃತಿ ಪಡೆಯಿಂದ ಸಭೆ, ಸೂಚನೆ

ಕಡಬ: ಕೊರೊನಾ ಹರಡುವುದನ್ನು ತಡೆಗಟ್ಟಲು ಗ್ರಾ.ಪಂ.ನಲ್ಲಿ ರಚಿಸಲಾದ ಜಾಗೃತಿ ಪಡೆಯ ಸಭೆ ನೂಜಿಬಾಳ್ತಿಲ ಗ್ರಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅಧ್ಯಕ್ಷತೆ ವಹಿಸಿ, ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಹೊರ ದೇಶದಿಂದ ಹಾಗೂ ಬೆಂಗಳೂರಿನಿಂದ ಬಂದವರನ್ನು ಹೊರಗೆ ಸುತ್ತಾಡದಂತೆ ಸೂಚಿಸಲಾಗಿದೆ. ಆರೋಗ್ಯ ಸಹಾಯಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಮನೆ ಬೇಟಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಲುಗುಡ್ಡೆಯಲ್ಲಿ ದಿನವಹಿ ವಸ್ತು ಖರೀದಿಸಲು ಸಮಯ ಹಾಗೂ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದ್ದು, …

ನೂಜಿಬಾಳ್ತಿಲ ಗ್ರಾ.ಪಂ | ಜಾಗೃತಿ ಪಡೆಯಿಂದ ಸಭೆ, ಸೂಚನೆ Read More »

ಕೊರೊನಾ ವಿರುದ್ಧ ಕಾರ್ಯಾಚರಣೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಶಾಸಕರ ವೇತನದ ಮೂರು ತಿಂಗಳ ಸಂಬಳವನ್ನು ಕೋರೋನಾ ವೈರಸ್ ವಿರುದ್ದದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಈ ಸಂಬಂಧ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪತ್ರ ಬರೆದಿದ್ದು ಕೋರೋಣಾ ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ತುಂಬಾ ನಷ್ಟವಾಗಿದೆ. ಈ ಸಂದರ್ಭದಲ್ಲಿ ನಾವು ನೈತಿಕವಾಗಿ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಹಾಯಕ್ಕೆ ಸಿದ್ದವಿದ್ದೇವೆ ಎಂದಿದ್ದಾರೆ. ಅಲ್ಲದೆ ಪ್ರಧಾನಿ ಕೈಗೊಂಡ 21 ದಿನಗಳ …

ಕೊರೊನಾ ವಿರುದ್ಧ ಕಾರ್ಯಾಚರಣೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ Read More »

ಲಾಕ್‌ಡೌನ್ | ಕಡಬ ತಾಲೂಕಿನಲ್ಲಿ ಉತ್ತಮ ಸ್ಪಂದನೆ

ಕಡಬ: ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆ ಸರ್ಕಾರದ ಲಾಕ್‍ಡೌನ್ ಅದೇಶಕ್ಕೆ ಕಡಬ ತಾಲೂಕಿನಲ್ಲಿ ಗುರುವಾರ ಸ್ಪಂದನೆ ದೊರೆಯಿತು. ತಾಲೂಕಿನ ಕಡಬ , ಆಲಂಕಾರು, ಕೊೈಲ, ರಾಮಕುಂಜ, ಹಳೆನೇರಿಂಕಿ, ಕೊಂಬಾರು, ಸವಣೂರು, ಕಾಣಿಯೂರು, ಬೆಳಂದೂರು, ನೂಜಿಬಾಳ್ತಿಲ, ಕಲ್ಲುಗುಡ್ಡೆ, ಕೋಡಿಂಬಾಳ ಮೊದಲಾದ ಪರಿಸರದಲ್ಲಿ ಬೆಳಿಗ್ಗೆ ಜಿನಸು ವಹಿವಾಟಿಗೆ ಜನತೆ ಮುಂದಾಗಿದ್ದರು. ಮಧ್ಯಾಹ್ನ 12 ಸುಮಾರಿಗೆ ಎಲ್ಲಾ ಅಂಗಡಿಗಳು ಮುಚ್ಚಿದ್ದವು ಜನ ಸಂಚಾರವೂ ವಿರಳವಾಗಿತ್ತು. ಬಳಿಕದ ಅವಧಿಯಲ್ಲಿ ಕಡಬ ಪೊಲೀಸರು ಕಾರ್ಯಚರಣೆಗಿಳಿದರು. ಅದೇಶವನ್ನು ಮೀರಿ ನಡೆದವರಿಗೆ ಲಾಠಿ ರುಚಿ ತೋರಿಸಿದರು. ಠಾಣಾ …

ಲಾಕ್‌ಡೌನ್ | ಕಡಬ ತಾಲೂಕಿನಲ್ಲಿ ಉತ್ತಮ ಸ್ಪಂದನೆ Read More »

error: Content is protected !!
Scroll to Top