ಲಾಕ್‌ಡೌನ್ | ಕಡಬ ತಾಲೂಕಿನಲ್ಲಿ ಉತ್ತಮ ಸ್ಪಂದನೆ

ಕಡಬ: ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆ ಸರ್ಕಾರದ ಲಾಕ್‍ಡೌನ್ ಅದೇಶಕ್ಕೆ ಕಡಬ ತಾಲೂಕಿನಲ್ಲಿ ಗುರುವಾರ ಸ್ಪಂದನೆ ದೊರೆಯಿತು. ತಾಲೂಕಿನ ಕಡಬ , ಆಲಂಕಾರು, ಕೊೈಲ, ರಾಮಕುಂಜ, ಹಳೆನೇರಿಂಕಿ, ಕೊಂಬಾರು, ಸವಣೂರು, ಕಾಣಿಯೂರು, ಬೆಳಂದೂರು, ನೂಜಿಬಾಳ್ತಿಲ, ಕಲ್ಲುಗುಡ್ಡೆ, ಕೋಡಿಂಬಾಳ ಮೊದಲಾದ ಪರಿಸರದಲ್ಲಿ ಬೆಳಿಗ್ಗೆ ಜಿನಸು ವಹಿವಾಟಿಗೆ ಜನತೆ ಮುಂದಾಗಿದ್ದರು.

ಮಧ್ಯಾಹ್ನ 12 ಸುಮಾರಿಗೆ ಎಲ್ಲಾ ಅಂಗಡಿಗಳು ಮುಚ್ಚಿದ್ದವು ಜನ ಸಂಚಾರವೂ ವಿರಳವಾಗಿತ್ತು. ಬಳಿಕದ ಅವಧಿಯಲ್ಲಿ ಕಡಬ ಪೊಲೀಸರು ಕಾರ್ಯಚರಣೆಗಿಳಿದರು. ಅದೇಶವನ್ನು ಮೀರಿ ನಡೆದವರಿಗೆ ಲಾಠಿ ರುಚಿ ತೋರಿಸಿದರು.

ಠಾಣಾ ವ್ಯಾಪ್ತಿಯಲ್ಲಿ ಸಾಯಂಕಾಲ ಮೈದಾನಗಳಲ್ಲಿ ಗುಂಪು ಸೇರಿ ಆಟ ಆಡುವ ಮಂದಿಗೆ ನೀತಿ ಪಾಠ ಬೋಧಿಸಿ ಲಾಠಿ ಏಟು ಕೊಟ್ಟರು. ಜಿನಸು, ಮೆಡಿಕಲ್ ಶಾಪ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ

Leave A Reply

Your email address will not be published.