ಬೆಳ್ಳಾರೆ ಗ್ರಾ.ಪಂ | ಅತ್ಯವಶ್ಯಕ ವಸ್ತುಗಳನ್ನು ಕೊಂಡುಹೋಗಬೇಕಾದರೆ ಈ ನಿಯಮಗಳನ್ನು ಪಾಲಿಸಿ

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಳೆ ಮಾರ್ಚ್ 27 ರಿಂದ ಅತ್ಯವಶ್ಯಕ ವಸ್ತುಗಳನ್ನು ಕೊಂಡೊಯ್ಯುವಿರೆ ಹಾಗಾದರೆ ಮುಂದಿನ ಆದೇಶದವರೆಗೆ ಈ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಿರಿ_


Ad Widget

Ad Widget

ಕರೋನಾ ವೈರಸ್ ಮುಂಜಾಗ್ರತವಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ಕಟ್ಟುನಿಟ್ಟಾದ ಆದೇಶಗಳನ್ನ ಹೊರಡಿಸಲಾಗಿದೆ. ವಿಶೇಷವಾಗಿ ನಾಳೆಯಿಂದ (ಮಾರ್ಚ್ 27 ರಿಂದ) ಬೆಳ್ಳಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ *ಅತ್ಯವಶ್ಯಕವಾಗಿ ಬೇಕಾದ ಮೆಡಿಕಲ್ ,ಹಾಲು ,ದಿನಸಿ ,ತರಕಾರಿ* ಗಳನ್ನ ಕೊಂಡುಕೊಳ್ಳುವಿರಾದರೆ ಈ ಕೆಳಗೆ ತಿಳಿಸಿದ ನಿಯಮಗಳನ್ನ ಕಟ್ಟು ನಿಟ್ಟಾಗಿ ಮುಂದಿನ ಆದೇಶ ಬರುವವರೆಗೆ ಪಾಲಿಸಬೇಕಿದೆ._ [ *ವಿ.ಸೂ* : ಮೆಡಿಕಲ್ ಎಂದಿನಂತೆ ಸಂಪೂರ್ಣವಾಗಿ ಕಾರ್ಯಾಚರಿಸಲಿದೆ ]


Ad Widget

★ ಅವಶ್ಯ ವಸ್ತುಗಳನ್ನು ಕೊಂಡುಕೊಳ್ಳಲು ನಿಗದಿ ಪಡಿಸಿದ ಸಮಯ ಬೆಳಗ್ಗೆ 6 ರಿಂದ ಬೆಳಗ್ಗೆ 11 ರವರೆಗೆ ಯಾಗಿರುತ್ತದೆ .

★ ನಿಗದಿ ಪಡಿಸಿದ ಸಮಯದಲ್ಲಿ *ನಮಗೆ ಬೇಕಾದ* ಸಾಮಾಗ್ರಿ ಗಳನ್ನ ಕೊಂಡುಕೊಳ್ಳುವುದು ,ಸಮಯ ಮೀರಿದ ನಂತರ ಯಾವುದೇ ಕಾರಣಕ್ಕೂ ಅವಕಾಶ ವಿಲ್ಲ.

Ad Widget

Ad Widget

Ad Widget

★ ಪಂಚಾಯತ್ ನಿಂದ ಎಳೆದ 6 ಅಡಿ ಗೆರೆಯಲ್ಲಿ ಅಂತರ ಕಾಪಾಡಿಕ್ಕೊಂಡು ಖರೀದಿಸುವುದು. ನೂಕುನುಗ್ಗಲಿಗೆ ಯಾವುದೇ ಕಾರಣಕ್ಕೂ ಅವಕಾಶ ವಿಲ್ಲ .

★ ದಿನಸಿ ,ತರಕಾರಿ ಕೊಂಡುಕೊಳ್ಳುವಾಗ ಮಳಿಗೆ ಮುಂದೆ ಪಂಚಾಯತ್ ನಿಂದ ನೇಮಿಸಲ್ಪಟ್ಟ ಸ್ವಯಂ ಸೇವಕರಿರುತ್ತಾರೆ ,ಅವರು ಚೀಟಿ ಕೊಟ್ಟಾಗ ಅದರಲ್ಲಿ ಅವಶ್ಯ ವಿರುವ ಸಾಮಾಗ್ರಿ ಗಳನ್ನ ಭರ್ತಿ ಮಾಡಿರಿ (ವಿ.ಸೂ : ಅವಿದ್ಯಾವಂತರು ,ವಯಸ್ಸಾದವರಿಗೆ ವಿನಾಯಿತಿ ಇದ್ದು ಅವರು ಸ್ವಯಂ ಸೇವಕರ ಸಹಾಯ ಪಡೆದು ಚೀಟಿಯಲ್ಲಿ ಬೇಕಾದ ಅವಶ್ಯ ವಸ್ತುಗಳನ್ನು ಭರ್ತಿ ಮಾಡಿಕೊಳ್ಳುವಂತದ್ದು] ಭರ್ತಿ ಮಾಡಿ ಕೊಟ್ಟಾಗ ಟೋಕನ್ ನೀಡುತ್ತಾರೆ ,ಆ ಪ್ರಕಾರ ವಾಗಿಯೇ ಹೋಗಬೇಕಾಗುತ್ತದೆ.

★ ದಿನಸಿ ಸಾಮಾಗ್ರಿ ಗಳನ್ನ ಕೊಂಡ ತಕ್ಷಣ ಅಲ್ಲಿಯೇ *ಕಾಲಾಹರಣ ಮಾಡದೇ ತಕ್ಷಣ ಮನೆಸೇರುವುದು.

★ ನೀವು ಅತ್ಯವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಬರುವಿರೆ ಮಾಸ್ಕ್ /ಟವಲ್ ಕಡ್ಡಾಯವಾಗಿ ಧರಿಸಿರಬೇಕು .ಇಲ್ಲವಾದಲ್ಲಿ ಕೊಂಡುಕೊಳ್ಳಲು ಅವಕಾಶವಿರುವುದಿಲ್ಲ ತಪ್ಪದೇ ಪಾಲಿಸಿರಿ.

★ ಷರತ್ತು ಮೀರಿ ನಡೆದರೆ ,ಗುಂಪು ಸೇರುವುದು ಕಂಡರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು.

★ ಕ್ಯೂ ನಲ್ಲಿ ನಿಂತು ಸಹಕರಿಸುವಂತದ್ದು.

★ ಅಂಗಡಿ ಮಾಲಿಕರು *MRP* ಬೆಲೆಗಿಂತ ಜಾಸ್ತಿಗೆ ಮಾರಬಾರದು.ಅಂತಹದ್ದು ಕಂಡು ಬಂದಲ್ಲಿ ಕಾನೂನು ಕ್ರಮಕ್ಕೆ ಒಳಗಾಗುವಿರಿ.ಇದರಲ್ಲಿ ನಿಮಗೆ ಯಾವುದೇ ರೀತಿಯ ಗೊಂದಲ ,ಮಾಹಿತಿ ಬೇಕಾದಲ್ಲಿ ಸಂಪರ್ಕಿಸಬಹುದಾಗಿದೆ [ *24X7* ] ಧನಂಜಯ ಕೆ ಆರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆಳ್ಳಾರೆ ಗ್ರಾ.ಪಂ ಮೊ : +917019979307

error: Content is protected !!
Scroll to Top
%d bloggers like this: