ಮದ್ಯ ಮಾರಾಟ ಇಲ್ಲದ ಕಾರಣ ಅಕ್ರಮ ಮಾರಾಟಗಾರರು ಫುಲ್ ಆಕ್ಟಿವ್ | ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಲೋಕಯ್ಯ ಅರೆಸ್ಟ್
ಕಡಬ, ಮಾ.25 : ಅಕ್ರಮ ಮದ್ಯ ಮಾರಾಟ ಜಾಲಗಳು ಏಕಾಏಕಿ ಚುರುಕಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವೆಡೆ ಅಕ್ರಮ ಮದ್ಯ ಮಾರಾಟವಾಗುತ್ತಿವೆ. ಸರಕಾರ 21 ದಿನಗಳ ಲಾಕ್ ಔಟ್ ಘೋಷಿಸಿದ ನಂತರ ರಾಜ್ಯದ ಎಲ್ಲಾ ಮದ್ಯ ಮಾರಾಟ ಮಳಿಗೆಗಳು ಬಂದ್ ಆಗಿವೆ. ಪೀಡ್ಕ ಅನ್ನು ದಿನದ ಅಭ್ಯಾಸವನ್ನಾಗಿ ಮಾಡಿಕೊಂಡವರು ಈಗ ಕಳವಳಕ್ಕೆ ಈಡಾಗಿದ್ದಾರೆ. ಸಂಜೆಯ ಹೊತ್ತಿಗೆ ಮಧ್ಯ ದೊರೆಯದೆ, ಈ ರೀತಿ ಅಕ್ರಮ ಮದ್ಯ ಮಾರಾಟಗಾರರ ಮಾಲ್ ಗೆ ಕಾಯುವಂತಾಗಿದೆ.
ಇಂತಹ ಅಕ್ರಮ ಮದ್ಯ ಮಾರಾಟ ಮಾಡುವ ಅಡ್ಡೆ ಯೊಂದಕ್ಕೆ ಇವತ್ತು ಕಡಬ ಪೊಲೀಸರು ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದರು. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ, ವಿಸ್ಕಿಯ ಪ್ಯಾಕೆಟ್ ಗಳನ್ನು ಹಾಗೂ ಬಿಯರ್ ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಲೋಕಯ್ಯ ಎಂದು ಗುರುತಿಸಲಾಗಿದೆ. ಆರೋಪಿಯು ಕಡಬ ಠಾಣಾ ವ್ಯಾಪ್ತಿಯ ಚಾಕೋಟೆಕೆರೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಕಡಬ ಪೊಲೀಸರು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡಿದ್ದಾರೆ.