Mangaluru Jail: ಸುಹಾಸ್ ಹತ್ಯೆ ಪ್ರಕರಣದ ಆರೋಪಿಗಳು, ಇನ್ನೊಂದು ಗ್ಯಾಂಗ್‌ ನಡುವೆ ಜೈಲಿನಲ್ಲಿ ಮಾರಾಮಾರಿ

Share the Article

Mangalore: ಕೊಡಿಯಾಲಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿರುವ ಕುರಿತು ವರದಿಯಾಗಿದೆ.

ಸುಹಾಸ್‌ ಹತ್ಯೆ ಪ್ರಕರಣದ ಆರೋಪಿಗಳು ಮತ್ತು ಇನ್ನೊಂದು ಗ್ಯಾಂಗ್‌ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನೌಷಾದ್‌ ಮೇಲೆ ಹಲವು ಕೈದಿಗಳು ದಾಳಿ ಮಾಡಿರುವ ಕುರಿತು ಹೇಳಲಾಗಿದೆ.

ವರದಿ ಪ್ರಕಾರ, ಬಿ ಬ್ಯಾರಕ್‌ನಲ್ಲಿದ್ದ ಕೈದಿಗಳು ನೌಷಾದ್‌ನನ್ನು ಮೈಸೂರು ಜೈಲಿಗೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಕಲ್ಲು ತೂರಿ ಹಲ್ಲೆ ಮಾಡಲು ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಕೂಡಲೇ ಜೈಲು ಸಿಬ್ಬಂದಿಗಳು ಈ ದಾಳಿಯನ್ನು ತಡೆದಿದ್ದಾರೆ.

ಈ ಘಟನೆ 7 ಗಂಟೆಗೆ ನಡೆದಿದು, ಜೈಲಿಗೆ ಎಸಿಪಿ ಪ್ರತಾಪ್‌ ಸಿಂಗ್‌ ಥೋರಟ್‌ ಬಂದಿದು, ಜೈಲಿನ ಸುತ್ತಮುತ್ತ ಪೊಲೀಸ್‌ ಬಿಗುಭದ್ರತೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಕುರಿತು ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Comments are closed.