ಮಹಿಳಾ PSI ಮೇಲೆ ಹಲ್ಲೆ ಯತ್ನ | ಆರೋಪಿಗೆ ಶೂಟ್ ಮಾಡಿದ ಸಬ್ ಇನ್ಸ್ಪೆಕ್ಟರ್

ಬೆಂಗಳೂರು, ಮಾ.26 : ಪೊಲೀಸರ ಮೇಲೆ ಕೈ ಮಾಡಿದ ಆರೋಪಿ ತಾಜುದ್ದೀನ್ ಎಂಬ ಕ್ರಿಮಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರು ಅಷ್ಟಿಷ್ಟು ಕನಿಕರ ತೋರಿಸದೆ ಹೋಗಿದ್ದಿದ್ದರೆ ಆತ ಇಷ್ಟೊತ್ತಿಗಾಗಲೇ ಅನಾಥವಾಗಿ ಸತ್ತ ನಾಯಿಯಂತೆ ಬೀದಿಯಲ್ಲಿ ಬಿದ್ದಿರುತ್ತಿದ್ದ.


Ad Widget

Ad Widget

ನಿನ್ನೆ ಮದ್ಯಾಹ್ನ ಜನರ ರಕ್ಷಣೆಗಾಗಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾಗ ಪೊಲೀಸರ ಮೇಲೆಯೇ ತಾಜುದ್ದಿನ್ ತಿರುಗಿಬಿದ್ದಿದ್ದು ಪೊಲೀಸ್ ಪೇದೆ
ಕೈಮಾಡಿದ್ದ. ಆವಾಗಲೇ ಆತನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ನಿಶ್ಚಿತವಾಗಿತ್ತು. ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಇದು ಪೊಲೀಸರ ಮೇಲೆ ಹಲ್ಲೆ ಮಾತ್ರವಲ್ಲ ಒಂದು ವ್ಯವಸ್ಥೆಯ ಮೇಲೆಯೇ ಹಲ್ಲೆ ಎಂದಿದ್ದರು. ಆರೋಪಿ ತಾಜುದ್ದೀನ್ ಮೇಲೆ ರೌಡಿ ಶೀಟರ್ ಕೇಸ್ ಮತ್ತಿತರ ಜಡಿದಿದ್ದರು.


Ad Widget

ನಿನ್ನೆ ರಾತ್ರಿ ಆತನನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಸಬ್ ಇನಸ್ಪೆಕ್ಟರ್ ರೂಪಾ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ತಕ್ಷಣ ಸಂಜಯ ನಗರ ಠಾಣೆಯ ಇನ್ಸ್ಪೆಕ್ಟರ್ ಬಾಲಾಜಿಯವರು ಅದಕ್ಕೇ ಕಾದಿದ್ದವರoತೆ ಪಿಸ್ತೂಲ್ ಹಿರಿದು ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡು ಬಿದ್ದಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: