ದಿನದ 24 ಗಂಟೆ ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯದ ನಿರ್ಧಾರ : ಗೊಂದಲಮಯ ನಡೆ ?

ಬೆಂಗಳೂರು : ರಾಜ್ಯ ಸರಕಾರ ಕೋರೋನಾ ವಿಷಯದಲ್ಲಿ ಗಲಿಬಿಲಿಯ ನಿರ್ಧಾರಕ್ಕೆ ಬರುತ್ತಿದೆ. ಒಂದು ಸಲ ಟೋಟಲ್ ಲಾಕ್ ಡೌನ್ ಅನ್ನುತ್ತದೆ. ಮತ್ತೊಂದು ಸಲ ಊರಿಗೆ ಹೋಗುವವರು ಹೋಗಬಹುದು ಅನ್ನುತ್ತದೆ. ಇನ್ನೊಂದು ಊರಿನಲ್ಲಿ ದಿನಸಿ ಸಾಮಾನುಗಳ ಕಲ್ಪಿಸುತ್ತೇವೆ ಅನ್ನುತ್ತಾರೆ. ಇವತ್ತು ಈಗ ತಾನೆ ಬಂದ ಹೊಸ ಸುದ್ದಿ: ದಿನಬಳಕೆಯ ಸಾಮಾನುಗಳನ್ನು ಕೊಳ್ಳಲು ಸೂಪರ್ಮಾರ್ಕೆಟ್ ಗಳನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ತೆರೆಯುತ್ತೇವೆ ಅನ್ನುತ್ತಿದ್ದಾರೆ. ಈ ಎಲ್ಲ ನಿರ್ಧಾರಗಳು ಗೋಜಲು ಗೋಜಲಾಗಿದೆ. ಸರಕಾರ ಪರದಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ತರನಾದ ನಿರ್ಧಾರಗಳು ಕಾಣಬರುತ್ತವೆ.


Ad Widget

ದಿನ ಬಳಕೆಯ ಅಗತ್ಯ ವಸ್ತುಗಳಿಗೆ ಜನರು ಮುಗಿ ಬೀಳುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿಗಳನ್ನು ಓಪನ್ ಮಾಡುವುದಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನುಮತಿ ನೀಡಿದ್ದಾರೆ.

ಅಲ್ಲದೇ ಗುಂಪು ಸೇರದಂತೆ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.


Ad Widget

ಈ ಕುರಿತಂತೆ ಟ್ವಿಟ್ ಮಾಡಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ದಿನದ 24 ಗಂಟೆ ದಿನಸಿ ಅಂಗಡಿ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಜನಜಂಗುಳಿ ತಪ್ಪಿಸಲು 24 ಗಂಟೆಯೂ ಓಪನ್ ಮಾಡಲು ಅನುಮತಿ ನೀಡಲಾಗಿದೆ.


Ad Widget

ಅಲ್ಲದೇ ವೈದ್ಯಕೀಯ ನರೆವಿಗಾಗಿ ಪಾಸ್ ಅಗತ್ಯ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಅಲ್ಲದೆ ಸರಕಾರಿ ನೌಕರರು ಮತ್ತು ಇತರ ಜನರ ಸಾಗಾಣಿಕೆಗಾಗಿ ಬೆಂಗಳೂರಿನಲ್ಲಿ 180 ಬಸ್ಸುಗಳನ್ನು ಕೊಡಿಸುವುದಾಗಿ ಬಿಎಂಟಿಸಿ ಹೇಳಿಕೊಂಡಿದೆ.

Ad Widget

Ad Widget

Ad Widget

ದಿನದ 24 ಗಂಟೆ ಸೂಪರ್ಮಾರ್ಕೆಟ್ ಗಳನ್ನು ತೆರೆದಿಟ್ಟರೆ ಪ್ರತಿಯೊಬ್ಬರು ನಾಳೆ ಬೀದಿಯಲ್ಲಿ ಇರುತ್ತಾರೆ. ಕೈಯಲ್ಲೊಂದು ಬ್ಯಾಗ್ ಹಿಡಿದುಕೊಂಡರೆ ಅವರನ್ನು ಪೊಲೀಸರು ಕೂಡ ಕೇಳುವಂತಿಲ್ಲ. ಕೇಳಿದರು ನಾವು ಇಲ್ಲಿಯೇ ಮನೆಯ ದಿನಸಿ ತರಲು ಹೋಗುತ್ತಿದ್ದೇವೆ ಎಂದು ಬಿಟ್ಟರಾಯಿತು. ಮೊದಲೇ ನಮ್ಮ ಜನರನ್ನು ಕಂಟ್ರೋಲ್ ಮಾಡಲು ಆಗುತ್ತಿಲ್ಲ.

ಸರಕಾರ ಸುಯಿಸೈಡ್ ನದೆ ಇಟ್ಟಿದೆ. ಈ ಪ್ಲಾನು ವರ್ಕ್ ಔಟ್ ಆಗುವುದಿಲ್ಲ. ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ಜನರು ವಾಸಿಸುವ ಮನೆಯ ಬಳಿಯೇ ಜನರಿಗೆ ಅಗತ್ಯವಾದ ಸಾಮಾನುಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದರೆ ಒಳಿತು .

0 thoughts on “ದಿನದ 24 ಗಂಟೆ ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯದ ನಿರ್ಧಾರ : ಗೊಂದಲಮಯ ನಡೆ ?”

  1. Pingback: ಸೂಪರ್ ಮಾರ್ಕೆಟ್ ಗಳನ್ನು 24 x 7 ತೆರೆಯುವ ಹಿಂದೆ ಕಮಿಷನರ್ ಕೈವಾಡ ? | ಡಿಸಿಎಂ ಅಶ್ವಥ್ ನಾರಾಯಣ್ ನೇರ ಆರೋಪ - ಹೊಸ ಕನ್ನ

error: Content is protected !!
Scroll to Top
%d bloggers like this: