ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವು

ಮೆಕ್ಕಾ ಪ್ರವಾಸ ಮುಗಿಸಿ ಬಂದು ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ನಡೆದಿದೆ.

70 ವರ್ಷದ ಈ ಮಹಿಳೆ ಕಳೆದ 9 ದಿನಗಳಿಂದಲೂ ಹೋಮ್ ಕ್ವಾರಂಟೈನ್ ನಲ್ಲಿದ್ದರು.

ನಿನ್ನೆ ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ರಾಜೀವಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ.

ವೃದ್ದೆ ಇತ್ತೀಚಿಗಷ್ಟೇ ಮೆಕ್ಕಾ ಯಾತ್ರೆಗೆ ತೆರಳಿ ವಾಪಾಸಾಗಿದ್ದರು. ಮಹಿಳೆಗೆ ಹೃದ್ರೋಗ ಹಾಗೂ ಬಿಪಿ ಸಮಸ್ಯೆಯಿತ್ತು. ಮಹಿಳೆಯ ಗಂಟಲಿನ ದ್ರವನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ. ವೈದ್ಯಕೀಯ ರಿಪೋರ್ಟ್ ಇಂದು ಸಂಜೆಯೊಳಗೆ ವೈದ್ಯರ ಕೈ ಸೇರುವ ನಿರೀಕ್ಷೆಯಿದೆ.

Leave A Reply

Your email address will not be published.