ನಾಳೆಯಿಂದ ಮಂಗಳೂರಿನಲ್ಲಿ ಎಲ್ಲವೂ ಬಂದ್

ಕೊರೊನಾ ವೈರಸ್ ಭೀತಿಯಲ್ಲಿರುವ ದೇಶದಲ್ಲಿ ಈಗಾಗಲೇ ಸಂಪೂರ್ಣ ಲಾಕ್‌ ಡೌನ್ ಘೋಷಿಸಲಾಗಿದೆ.

ಆದರೂ ಜನತೆ ಸೆಕ್ಷನ್ 144 ಹೇರಿದ್ದರೂ ರಸ್ತೆ ಬದಿಗೆ ವಿನಾಕಾರಣ ಬರುತ್ತಿದ್ದು,ಇದನ್ನು ನಿಯಂತ್ರಣ ಮಾಡಲು ನಾಳೆಯಿಂದ ಸಂಪೂರ್ಣ ಬಂದ್ ಮಾಡಲಾಗುತ್ತದೆ.

ಅಗತ್ಯ ವಸ್ತುಗಳನ್ನು ನಾವೇ ಪೂರೈಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಕಟ್ಟು ನಿಟ್ಟಿನ ಕ್ರಮ ಅನಿವಾರ್ಯ ಆದರಿಂದ ನಾಳೆಯಿಂದ ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಸೂಚನೆ ನೀಡಿದ್ದಾರೆ.

Pic : Daya Kukkaje

ಹಲವೆಡೆ ಮಾರ್ಕೆಟ್ , ಅಗತ್ಯ ವಸ್ತುಗಳ ಖರೀದಿಗೆ ಜನ ಒಮ್ಮೆಲೆ ಮುಗಿಬೀಳುತ್ತಿದ್ದಾರೆ. ವರ್ತಕರು ಗ್ರಾಹಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ವ್ಯಾಪಾರ ವಹಿವಾಟು ಮಾಡುವ ಬಗ್ಗೆ ತಿಳಿದುಬಂದಿದ್ದು ಹೀಗಾಗಿ ನಾಳೆ ಎಲ್ಲವನ್ನು ಬಂದ್ ಮಾಡಲಾಗುವುದು ಎಂದಿದ್ದಾರೆ.

Leave A Reply

Your email address will not be published.