ಮಾ.31 ರ ವರೆಗೆ ಬಾರ್ ಆಂಡ್ ರೆಸ್ಟೋರೆಂಟ್ ಬಂದ್ | ಮನೇಲೇ ಪೆಗ್ ಹಾಕೋ ಯೋಚ್ನೆ ಮಾಡೋರು ನಿಮ್ಮ ಮನೇಲಿ ಇರುವ ಕರೀನಾ ಬಗ್ಗೆ ಎಚ್ಚರ !
ಬೆಂಗಳೂರು, ಮಾ. 20 : ಕೊರೊನಾ ವೈರಸ್ ಹರಡದಂತೆ ಸ್ಕೂಲ್, ಕಾಲೇಜು, ಪಬ್, ಸ್ವಿಮ್ಮಿಂಗ್ ಪೂಲ್, ಮದುವೆ ಸಮಾರಂಭ ಮಾತ್ರವೇ ಬಂದ್ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಇದೀಗ ನಾಳೆಯಿಂದ ಮಾರ್ಚ್ 31 ರ ವರೆಗೆ ರಾಜ್ಯದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಬಂದ್ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಇವತ್ತು ಸುತ್ತೋಲೆ ಹೊರಡಿಸಿರುವ ಅಬಕಾರಿ ಇಲಾಖೆ, ನಾಳೆಯಿಂದ ಮಾರ್ಚ್ 31 ರವರೆಗೆ ರಾಜ್ಯದಲ್ಲಿ ಬಾರ್ ಬಂದ್ ಮಾಡಲಾಗುತ್ತಿದೆ. ಕೊರೊನಾ ವ್ಯಾಧಿ ಮತ್ತಷ್ಟು ಜನರಿಗೆ ಹರಡದಂತೆ ನಿಯಂತ್ರಣ ಕ್ರಮ ಇದಾಗಿದೆ ಎಂದು ಅಬಕಾರಿ ಇಲಾಖೆ ಹೇಳಿದೆ.
ಆದರೆ ರೆಸ್ಟೋರೆಂಟ್ ಗಳಲ್ಲಿ ಕಿಚನ್ ಸೆಕ್ಷನ್ ಓಪನ್ ಇರುತ್ತದೆ. ಸ್ವಿಗ್ಗಿ, ಝೋಮ್ಯಾಟೋ ಮುಂತಾದ ಡೆಲಿವರಿ ಆಪ್ ಮೂಲಕ ಆಹಾರವನ್ನು ತರಿಸಿಕೊಳ್ಳಬಹುದು.
ಮದ್ಯ ಸೇವನೆಯಿಂದ ಜನರಲ್ಲಿ ಆರೋಗ್ಯದ ಬಗ್ಗೆ ಅರಿವಿದ್ದವರೂ ಕೂಡಾ, ಮದ್ಯದ ಪರಿಣಾಮದಿಂದ ಪರಸ್ಪರ ಜನರು ಬೆರೆಯುವ ಪ್ರಮಾಣ ಜಾಸ್ತಿ ಆಗುತ್ತದೆ. ಕುಡ್ದವರು ಜಾಸ್ತಿ ಮಾತಾಡುತ್ತಾರೆ. ಆ ಮೂಲಕ ಕೋರೋನಾ ವೈರಸ್ ಹರಡುವ ಸಂಭವ ಜಾಸ್ತಿ .
ಪಾಪ, ನಾಳೆಯಿಂದ ಎಣ್ಣೆ -ಪಿಡ್ಡ್ಕ ಸಿಗೋದಿಲ್ಲ. ಕುಡಿತದ ಅಭ್ಯಾಸ ಮಾಡಿಕೊಂಡವರು ಏನು ಮಾಡ್ತಿರೋ ? ಕುಡಿಯೋ ಅಭ್ಯಾಸ ಇರುವ ಜನರು ಏನಾದ್ರೂ ಆಲ್ಟರ್ ನೇಟ್ ವ್ಯವಸ್ಥೆ ಮಾಡಿಯೇ ಮಾಡ್ತಾರೆ. ಅವರಿಗೆ ಯಾರೂ ಹೇಳಿ ಕೊಡಬೇಕಿಲ್ಲ. ಒಟ್ಟಾರೆ ಗುಂಪು ಸೇರಬೇಡಿ. ಮನೇಲೇ ಪಾರ್ಟಿ ಮಾಡಿ. ಮನೇಲೇ ಪೆಗ್ ಹಾಕೋ ಯೋಚ್ನೆ ಮಾಡೋರು ನಿಮ್ಮ ಮನೇಲಿ ಇರುವ ನಿಮ್ಮ ಕರೀನಾ ಬಗ್ಗೆ ಎಚ್ಚರ. ಕರೋನಾ ಕಾಡಿದರೆ ಸರಕಾರ ಸಹಾಯಕ್ಕೆ ಬರತ್ತೆ. ಕರೀನಾ ಕಾಡಿದರೆ…… ಉಫ್….ದೇವರೂ ಸಹಾಯಕ್ಕೆ ಬರಲಾರ !!