Day: February 29, 2020

ಮಾ.3 / ಬೆಟ್ಟಂಪಾಡಿ-ಇರ್ದೆಯಲ್ಲಿ ದೈವಗಳ ನೇಮೋತ್ಸವ

ಪುತ್ತೂರು : ಬೆಟ್ಟಂಪಾಡಿ- ಇರ್ದೆ ಶ್ರೀ ಉಳ್ಳಾಕುಲು ಮೈಸಂದಾಯ ಶ್ರೀ ಸತ್ಯದೇತೆ ಕಲ್ಕುಡ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮಾ.3ರ ಮಂಗಳವಾರ ನಡೆಯಲಿದೆ. ಮಾ.3ರಂದು ಬೆಳಿಗ್ಗೆ ನಾಗತಂಬಿಲ,ಗಣಹೋಮ ನಂತರ  ಉಳ್ಳಾಕುಲು ,ಮೈಸಂದಾಯ,ಪೊಟ್ಟ ಭೂತ ನೇಮೋತ್ಸವ ನಡೆಯಲಿದೆ.ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ  ವರ್ಣಾರ ಪಂಜುರ್ಲಿ ಭಂಡಾರ ತೆಗೆದು ನೇಮೋತ್ಸವ,ರಾತ್ರಿ ಕಲ್ಲುರ್ಟಿ,ಕಲ್ಕುಡ ,ಗುಳಿಗ,ದೂಮಾವತಿ ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ ,ಅನ್ನಸಂತರ್ಪಣೆ ನಡೆಯಲಿದೆ. ಅಲ್ಲದೆ ಪ್ರತೀ ಮಂಗಳವಾರ,ಶುಕ್ರವಾರ,ಆದಿತ್ಯವಾರದಂದು ಇಲ್ಲಿ ಕುಂಕುಮಾರ್ಚನೆ,ಮಂಗಳಾರತಿ ಸೇವೆ ಹಾಗೂ ಪ್ರತೀ ತಿಂಗಳ ಸಂಕ್ರಮಣ ದಿನದಂದು ಅಗೇಲು …

ಮಾ.3 / ಬೆಟ್ಟಂಪಾಡಿ-ಇರ್ದೆಯಲ್ಲಿ ದೈವಗಳ ನೇಮೋತ್ಸವ Read More »

ಮಾ.1 | ಪುತ್ತೂರು ಸುದಾನ ಶಾಲಾ ಕ್ರೀಡಾಂಗಣದಲ್ಲಿ ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟ

ಪುತ್ತೂರು : ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ  ಕುಲಾಲ ಬಾಂಧವರ ತಾಲೂಕು ಮಟ್ಟದ ವೈಯಕ್ತಿಕ ಸ್ಪರ್ಧೆಗಳು ಹಾಗೂ ಅಂತರ್ ತಾಲೂಕು ಮಟ್ಟದ ಗುಂಪು ಸ್ಪರ್ಧೆಗಳು ಮಾ.೧ರಂದು ನೆಹರುನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ  ನಡೆಯಲಿದೆ. ಬೆಳಿಗ್ಗೆ ೯.೩೦ಕ್ಕೆ ಕ್ರೀಡಾಕೂಟವನ್ನು ರಾಜ್ಯಗುಪ್ತಚರ ಇಲಾಖೆಯ ಮಂಗಳೂರು ಘಟಕದ  ಪಿಎಸೈ ಯಶವಂತ ಪಿ.ವಿ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ  ಕೆ ವಹಿಸುವರು.ಅತಿಥಿಗಳಾಗಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೈಸೂರು ಯೋಜನಾಽಕಾರಿ ಗಾಯತ್ರಿ, …

ಮಾ.1 | ಪುತ್ತೂರು ಸುದಾನ ಶಾಲಾ ಕ್ರೀಡಾಂಗಣದಲ್ಲಿ ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟ Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಾಲೋಚನಾ ಸಭೆ, ಅಷ್ಟಮಂಗಲ ಚಿಂತನೆ-ಸಮಿತಿ ರಚನೆ

ಸವಣೂರು : ನಮ್ಮ ಯೋಜನೆಗಳು ಯೋಚನೆಗಳು ಅತ್ಯಂತ ಯಶಸ್ವಿಯಾಗಲು ಭಗವಂತನ ಅನುಗ್ರಹ ಪ್ರಾಪ್ತಿಯಾಗಿದ್ದು, ಮುಂದಿನ ದಿವಸಗಳಲ್ಲಿ ದೇವಸ್ಥಾನದ ವ್ಯವಸ್ಥೆಗಳಿಗೆ ವೇಗವನ್ನು ಕೊಟ್ಟು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಭಗವಂತನು ಶಕ್ತಿಯನ್ನು ಕೊಡಲಿ ಎಂದು ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.  ಅವರು ಕುದ್ಮಾರು ಗ್ರಾಮದ ಬರೆಪ್ಪಾಡಿ ಪಾಂಡವ ಪ್ರತಿಷ್ಟೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ದೇವಸ್ಥಾನದ ವಠಾರದಲ್ಲಿ ಫೆ ೨೮ರಂದು ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಳೆದ ಶಿವರಾತ್ರಿಯ ದಿವಸ ಜೀರ್ಣೋದ್ಧಾರ ಸಂಕಲ್ಪ …

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಾಲೋಚನಾ ಸಭೆ, ಅಷ್ಟಮಂಗಲ ಚಿಂತನೆ-ಸಮಿತಿ ರಚನೆ Read More »

ನಾಳೆ ಉಜಿರೆಯಲ್ಲಿ ‘ ಮುಳಿಯ ಗಾನ ರಥ ‘ : ಹೊರಬರಲಿ ನಿಮ್ಮಲ್ಲಿರುವ ಸುಪ್ತ ಗಾಯನ ಪ್ರತಿಭೆ

ನಾಳೆ ಬೆಳ್ತಂಗಡಿಯ ಮುಳಿಯ ಚಿನ್ನದಂಗಡಿಯ ಪ್ರಾಯೋಜಕತ್ವದಲ್ಲಿ ‘ ಮುಳಿಯ ಗಾನ ರಥ ‘ ಕರೋಕೆ ಹಾಡುಗಳ ಗಾಯನ ಸ್ಪರ್ಧಾ ಸಂಭ್ರಮ. ಹಾಡು ಸ್ಪರ್ಧೆಯು ಉಜಿರೆಯ ಅರಿಪ್ಪಾಡಿ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಆಯೋಜಿಸಲ್ಪಟ್ಟಿದೆ. ಸ್ಪರ್ಧೆಯಲ್ಲಿ ಒಟ್ಟು ಎರಡು ಭಾಗಗಳಿದ್ದು, 12 ವರ್ಷದಿಂದ 21 ವರ್ಷದವರೆಗೆ ಮೊದಲ ವಿಭಾಗವಿರುತ್ತದೆ. 21 ವರ್ಷದಿಂದ ಮೇಲ್ಪಟ್ಟು ಸಾರ್ವಜನಿಕರಿಗಾಗಿ ಇನ್ನೊಂದು ವಿಭಾಗವಿದೆ. ಕನ್ನಡ, ತುಳು ಮತ್ತು ಹಿಂದಿ ಭಾಷೆಯಲ್ಲಿ ಹಾಡುಗಾರರು/ಹಾಡುಗಾರ್ತಿಯರು ತಮ್ಮ ಮನದ ಭಾವಕ್ಕೆ ಜೀವ ತುಂಬಿ ಹಾಡಬಹುದು. ನಿಮ್ಮಲ್ಲಿ ಸುಪ್ತವಾಗಿರುವ ಹಾಡಿನ ಪ್ರತಿಭೆಯನ್ನು …

ನಾಳೆ ಉಜಿರೆಯಲ್ಲಿ ‘ ಮುಳಿಯ ಗಾನ ರಥ ‘ : ಹೊರಬರಲಿ ನಿಮ್ಮಲ್ಲಿರುವ ಸುಪ್ತ ಗಾಯನ ಪ್ರತಿಭೆ Read More »

ಕೊಡಾಜೆ |ಅನಾಥ ವೃದ್ದೆಯ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಊರ ನಾಗರಿಕರು

ಫೆ.29ರ ಬೆಳಿಗ್ಗೆ ಸುಮಾರು 7:00 ಘಂಟೆಗೆ ಕೊಡಾಜೆ ಮಸೀದಿಯ ಹತ್ತಿರದ ಒಂದು ಮನೆಯಲ್ಲಿ ಒಬ್ಬಳು ಬಡ ವೃಧ್ಧ ಮಹಿಳೆಯು ಸತ್ತಿದ್ದಾಳೆ ಎನ್ನುವ ಸುದ್ದಿಯು ಸಿಕ್ಕ ತಕ್ಷಣ ಹೋಗಿ ನೋಡಿದಾಗ ವಿಷಯ ನಿಜ. ಈ ವೃಧ್ಧೆಯು ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದು ಇವರಿಗೆ ಇನ್ನೊಬ್ಬ ಆನಾರೋಗ್ಯ ಪೀಡಿತ ವೃಧ್ಧೆ ಅಕ್ಕ ಮಾತ್ರ ಇದ್ಧು ಕುಟುಂಬಸ್ತರು ಯಾರೂ ಇಲ್ಲ ಎಂದರಿತ ಉರವರು ತಕ್ಷಣ ಕಾರ್ಯ ಪ್ರವರ್ತರಾದರು. ಕೊಡಾಜೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ರಾಜ್ಕಮಲ್ , ಹಬೀಬ್ ಕೊಡಾಜೆ, ಹಾಜಿ …

ಕೊಡಾಜೆ |ಅನಾಥ ವೃದ್ದೆಯ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಊರ ನಾಗರಿಕರು Read More »

ದೆಹಲಿ ಹಿಂಸಾಚಾರ | ಸಂಘ ಪರಿವಾರದ ಪಾತ್ರ-ಎಸ್.ಡಿ.ಪಿ.ಐ

ಸವಣರು: ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಎಸ್.ಡಿ.ಪಿ.ಐ ಸವಣೂರು ವಲಯದ ವತಿಯಿಂದ ಸವಣೂರು ಜಂಕ್ಷನ್‌ನಲ್ಲಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ ಮಾತನಾಡಿ ದೆಹಲಿ ಹಿಂಸಾಚಾರ ಪೂರ್ವಯೋಜಿತ ಕೃತ್ಯವಾಗಿದ್ದು ಇದರಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪಾತ್ರ ಎದ್ದು ಕಾಣುತ್ತಿದೆ, ಫ್ಯಾಶಿಸ್ಟ್ ಶಕ್ತಿಗಳು ಎಷ್ಟೇ ತಂತ್ರ ಹೂಡಿದರೂ ಅದರ ವಿರುದ್ಧ ಕಾನೂನಾತ್ಮಕ ಪ್ರತಿತಂತ್ರ ಹೂಡಲು ನಾವು ಸಿದ್ಧರಿದ್ದೇವೆ ಎಂದರು. ದೆಹಲಿಯಲ್ಲಿ ಅಮಾಯಕ ಮುಗ್ದ ಜನರನ್ನು ಬಲಿ ಪಡೆದು ವಿಜ್ರಂಭಿಸಿದ ಫ್ಯಾಶಿಸ್ಟ್ ಶಕ್ತಿಗಳ …

ದೆಹಲಿ ಹಿಂಸಾಚಾರ | ಸಂಘ ಪರಿವಾರದ ಪಾತ್ರ-ಎಸ್.ಡಿ.ಪಿ.ಐ Read More »

ಕಾಣಿಯೂರು| ಗ್ರಾ.ಪಂ.ನಿಂದ ವಿಕಲಚೇತನರಿಗೆ ನೆರವು

ಕಾಣಿಯೂರು ಗ್ರಾಮ ಪಂಚಾಯತ್ ನ ವತಿಯಿಂದ 14 ನೇ ಹಣಕಾಸು ನಿಧಿಯ ಶೇ 3 ವಿಕಲಚೇತನ ಅನುದಾನದಲ್ಲಿ ಮಠತ್ತಾರು ನಿವಾಸಿ ಮಾಣಿಗ ರವರ ಮಗ ಸೀತಾರಾಮ ಇವರ ಮನೆಗೆ ಸೋಲಾರ್ ವಿದ್ಯುತ್ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಕಾಣಿಯೂರು ವಾರ್ಡ್ ಸದಸ್ಯರಾದ ರಾಮಣ್ಣ ಗೌಡ ಮುಗರಂಜ,ಸುರೇಶ್ ಓಡಬಾಯಿ, ಲಲಿತಾ ತೋಟ ಉಪಸ್ಥಿತರಿದ್ದರು.

ಹರಿದು ಬಂದಿದೆ ಭಕ್ತ ಸಮುದ್ರ : ಬಂಡಾಡಿ ಉಳತ್ತೋಡಿ ಷಣ್ಮುಖ ಬ್ರಹ್ಮಕಲಶೋತ್ಸವದ ಕೊನೆಯ ದಿನ

ಇಂದು ಹಿರೇಬಂಡಾಡಿಯ ಉಳತ್ತೋಡಿ ಷಣ್ಮುಖ ದೇವಾಲಯದ ಬ್ರಹ್ಮಕಲಶೋತ್ಸವದ ಒಂಬತ್ತನೆಯ ಮತ್ತು ಕೊನೆಯ ದಿನ. ಇಂದು ಮು೦ಜಾನೆ ಮಹಾಗಣಪತಿ ಹೋಮ, ಕವಾಟ ಉದ್ಘಾಟನೆ, ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ್ತ ಶಾಂತಿ, ತತ್ವ ಹೋಮಗಳ ಕಲಾಭಿಶೇಕ, ಮಹಾಬಲಿ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮುಂತಾದ ವೈದಿಕ ಕಾರ್ಯಕ್ರಮಗಳು ಜರುಗಿದವು. ಇಂದು ಮಧ್ಯಾಹ್ನದ ಮಹಾಪೂಜೆ ವೇಳೆಗೆ ಹರಿದುಬಂತು ಜನಪ್ರವಾಹ. ದೊಡ್ಡ ಸಂಖ್ಯೆಯ ಭಕ್ತರು ಊರು ಪರವೂರುಗಳಿಂದ ನಿರಂತರವಾಗಿ ಬರುತ್ತಿದ್ದಾರೆ. ದೇವಸ್ಥಾನದ ಒಳಗೆ ದೇವರ ದರ್ಶನಕ್ಕಾಗಿ ಉದ್ದವಾದ ಕ್ಯೂ ನಿಂತಿದ್ದು ಕಂಡುಬಂತು. ಅಂತೆಯೇ ಮಧ್ಯಾಹ್ನದ …

ಹರಿದು ಬಂದಿದೆ ಭಕ್ತ ಸಮುದ್ರ : ಬಂಡಾಡಿ ಉಳತ್ತೋಡಿ ಷಣ್ಮುಖ ಬ್ರಹ್ಮಕಲಶೋತ್ಸವದ ಕೊನೆಯ ದಿನ Read More »

ಕಡಬ ಹೊಸ್ಮಠ | ತೋಟಕ್ಕೆ ಉರುಳಿ ಬಿದ್ದ ಬೊಲೆರೋ | ಮೂವರಿಗೆ ಗಾಯ

ಕಡಬ : ಬೊಲೆರೋ ವಾಹನವೊಂದು ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯ ಬಳಿ ನಡೆದಿದೆ. ಹೊಸ್ಮಠ ಸೇತುವೆಯ ವೇಗ ನಿಯಂತ್ರಕವನ್ನು ದಾಟಿದ ಬೊಲೆರೋ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ. ಇದು ದೊಡ್ಡ ಅಪಘಾತವಾಗಿದ್ದು ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಬೊಲೆರೋ ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗೆಜ್ಜೆಗಿರಿ| ಅಪ್ಪೆ ದೇಯಿ ಬೈದ್ಯೆತಿ ಕ್ಷೇತ್ರೋಡು ಬಾಲೆದ ಪಜ್ಜೆಡ್ ತೋಜಾಯೆರ್ ಕಾರ್ನಿಕ

ಪುತ್ತೂರು: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಚಾವಡಿಯಲ್ಲಿ ಪುರೋಹಿತರು ಬಿಡಿಸಿದ್ದ ಮಂಡಲದಲ್ಲಿ ಪುಟ್ಟ ಮಕ್ಕಳ ಗಾತ್ರದ ಹೆಜ್ಜೆಗುರುತು ಕಾಣಿಸಿಕೊಳ್ಳುವ ಮೂಲಕ ತಾಯಿ ಬೈದ್ಯೇತಿ ತನ್ನ ಕಾರಣಿಕತೆ ತೋರಿಸಿದ್ದಾರೆ. ಗೆಜ್ಜೆಗಿರಿ ಸತ್ಯಧರ್ಮ ಚಾವಡಿಯಲ್ಲಿ ಪುರೋಹಿತರು ಚಿತ್ತಾರಗೊಳಿಸಿದ್ದ ಮಂಡಲದಲ್ಲಿ ಪುಟ್ಟ ಮಕ್ಕಳ ಗಾತ್ರದ ಹೆಜ್ಜೆಗುರುತು ಪ್ರತ್ಯಕ್ಷಗೊಂಡಿದ್ದು ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದೊಂದು ಪವಾಡ ಎನ್ನುವುದಕ್ಕಿಂತ ಕ್ಷೇತ್ರದ ಮಹಿಮೆ ಅಪಾರ ಎಂಬುದನ್ನು ತಾಯಿಯೇ ಈ ಮೂಲಕ ಭಕ್ತರಿಗೆ ದರ್ಶನ ನೀಡಿದ್ದಾರೆ ಎನ್ನಬಹುದು. ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಸತ್ಯಧರ್ಮ ಚಾವಡಿಯಲ್ಲಿ ಮಂಗಳವಾರ …

ಗೆಜ್ಜೆಗಿರಿ| ಅಪ್ಪೆ ದೇಯಿ ಬೈದ್ಯೆತಿ ಕ್ಷೇತ್ರೋಡು ಬಾಲೆದ ಪಜ್ಜೆಡ್ ತೋಜಾಯೆರ್ ಕಾರ್ನಿಕ Read More »

error: Content is protected !!
Scroll to Top