ಮಾ.1 | ಪುತ್ತೂರು ಸುದಾನ ಶಾಲಾ ಕ್ರೀಡಾಂಗಣದಲ್ಲಿ ಕುಲಾಲ ಸಮಾಜ ಸೇವಾ ಸಂಘದ ಕ್ರೀಡಾಕೂಟ

ಪುತ್ತೂರು : ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ  ಕುಲಾಲ ಬಾಂಧವರ ತಾಲೂಕು ಮಟ್ಟದ ವೈಯಕ್ತಿಕ ಸ್ಪರ್ಧೆಗಳು ಹಾಗೂ ಅಂತರ್ ತಾಲೂಕು ಮಟ್ಟದ ಗುಂಪು ಸ್ಪರ್ಧೆಗಳು ಮಾ.೧ರಂದು ನೆಹರುನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ  ನಡೆಯಲಿದೆ.

ಬೆಳಿಗ್ಗೆ ೯.೩೦ಕ್ಕೆ ಕ್ರೀಡಾಕೂಟವನ್ನು ರಾಜ್ಯಗುಪ್ತಚರ ಇಲಾಖೆಯ ಮಂಗಳೂರು ಘಟಕದ  ಪಿಎಸೈ ಯಶವಂತ ಪಿ.ವಿ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ  ಕೆ ವಹಿಸುವರು.ಅತಿಥಿಗಳಾಗಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೈಸೂರು ಯೋಜನಾಽಕಾರಿ ಗಾಯತ್ರಿ, ಪುತ್ತೂರು ಬಾಲಕಿಯರ ಸ.ಪ.ಪೂ  ಕಾಲೇಜಿನ ಉಪನ್ಯಾಸಕ  ಸುಽರ್ ಕುಮಾರ್ ಎಂ,ಪುಂಜಾಲಕಟ್ಟೆ  ಪೊಲೀಸ್ ಠಾಣೆಯ ಯತೀಂದ್ರ ಕೌಡಿಚ್ಚಾರು,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪುತ್ತೂರು ವಲಯದ ಅಧ್ಯಕ್ಷ ಶೀನಪ್ಪ ಕುಲಾಲ್ ಸೇಡಿಯಾಪು,ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮೋನಪ್ಪ ಕುಲಾಲ್ ಬೊಳ್ಳೊರೋಡಿ ಪಾಲ್ಗೊಳ್ಳುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು  ಸೌತ್ ವೆಸ್ಟರ್ನ್ ರೈಲ್ವೇಯ ಸುಪರಿಡೆಂಟ್ ಎಂ.ಬಾಲಕೃಷ್ಣ ವಹಿಸುವರು.ಕಾರ್ಪೋರೇಶನ್ ಬ್ಯಾಂಕ್ ಬೊಳ್ವಾರು ಶಾಖೆಯ ಸಹಾಯಕ ಪ್ರಬಂಧಕ ಪ್ರಸಾದ್ ಕುಲಾಲ್ ಮಾರ್ನಬಲ್ ಬಹುಮಾನ ವಿತರಿಸುವರು.

ಅತಿಥಿಗಳಾಗಿ ವೀರಮಂಗಲ ಶಾಲಾ ಶಿಕ್ಷಕಿ ಹರಿಣಾಕ್ಷಿ ವಸಂತ್,ಪುಣಚ ಗ್ರಾ.ಪಂ.ಅಭಿವೃದ್ದಿ ಅಽಕಾರಿ ಲಾವಣ್ಯ ಸೀತಾರಾಮ,ಉದಯವಾಣಿಯ ಪ್ರಸರಣ ವಿಭಾಗದ ಪುತ್ತೂರು ವಿಭಾಗದ ಜಯಾನಂದ ಸಿ.ಎಚ್,ಸಿವಿಲ್ ಎಂಜಿನಿಯರ್ ಮತ್ತು ಸರ್ವೆಯರ್ ರಾಜಶೇಖರ್ ರಾಮನರ ಪಾಲ್ಗೊಳ್ಳುವರು.

ಕ್ರೀಡಾಕೂಟದಲ್ಲಿ  ಪುರುಷರ ವಿಭಾಗದ ಕಬಡ್ಡಿಗೆ ಪ್ರಥಮ ೩೦೦೧,ದ್ವಿತೀಯ ೨೦೦೨ ಹಾಗೂ ಟ್ರೋಫಿ,ವಾಲಿಬಾಲ್ ಪ್ರಥಮ-೩೦೦೧,ದ್ವಿತೀಯ ೨೦೦೨ ಹಾಗೂ ಟ್ರೋಫಿ,ಹಗ್ಗಜಗ್ಗಾಟ-ಪ್ರಥಮ ೨೦೦೨,ದ್ವಿತೀಯ ೧೦೦೧ ಹಾಗೂ ಟ್ರೋಫಿ,ಮಹಿಳಾ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ೨೦೦೨ ,ದ್ವಿತೀಯ ೧೦೦೧ ಹಾಗೂ ಟ್ರೋಫಿ,ಹಗ್ಗಜಗ್ಗಾಟ ಪ್ರಥಮ ೨೦೦೨,ದ್ವಿತೀಯ ೧೦೦೧ ಹಾಗೂ ಟ್ರೋಫಿ ಬಹುಮಾನ ನೀಡಲಾಗುತ್ತದೆ.

ಹಾಗೂ ಮಕ್ಕಳ ವಿಭಾಗ,ಪುರುಷರ ವಿಭಾಗ,ಮಹಿಳಾ ವಿಭಾಗದಲ್ಲಿ ವೈಯುಕ್ತಿಕ ಸ್ಪರ್ಧೆಗಳು ನಡೆಯಲಿದೆ.ವಯಯುಕ್ತಿಕ ಸ್ಪರ್ಧೆಗಳು ಪುತ್ತೂರು ತಾಲೂಕಿನ ಕುಲಾಲ ಸಮಾಜ ಬಾಂಧವರಿಗೆ ಮಾತ್ರ, ಗುಂಪು ಸ್ಪರ್ಧೆಗಳು ಅಂತರ್ ತಾಲೂಕು ಮಟ್ಟದ ಸ್ಪರ್ಧೆಗಳಾಗಿರುತ್ತದೆ ಎಂದು ಕುಲಾಲ ಸಮಾಜ ಸೇವಾ ಸಂಘದ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.