ಕೊಡಾಜೆ |ಅನಾಥ ವೃದ್ದೆಯ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಊರ ನಾಗರಿಕರು

ಫೆ.29ರ ಬೆಳಿಗ್ಗೆ ಸುಮಾರು 7:00 ಘಂಟೆಗೆ ಕೊಡಾಜೆ ಮಸೀದಿಯ ಹತ್ತಿರದ ಒಂದು ಮನೆಯಲ್ಲಿ ಒಬ್ಬಳು ಬಡ ವೃಧ್ಧ ಮಹಿಳೆಯು ಸತ್ತಿದ್ದಾಳೆ ಎನ್ನುವ ಸುದ್ದಿಯು ಸಿಕ್ಕ ತಕ್ಷಣ ಹೋಗಿ ನೋಡಿದಾಗ ವಿಷಯ ನಿಜ.

ಈ ವೃಧ್ಧೆಯು ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದು ಇವರಿಗೆ ಇನ್ನೊಬ್ಬ ಆನಾರೋಗ್ಯ ಪೀಡಿತ ವೃಧ್ಧೆ ಅಕ್ಕ ಮಾತ್ರ ಇದ್ಧು ಕುಟುಂಬಸ್ತರು ಯಾರೂ ಇಲ್ಲ ಎಂದರಿತ ಉರವರು ತಕ್ಷಣ ಕಾರ್ಯ ಪ್ರವರ್ತರಾದರು.

ಕೊಡಾಜೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ರಾಜ್ಕಮಲ್ , ಹಬೀಬ್ ಕೊಡಾಜೆ, ಹಾಜಿ ಉಮ್ಮರ್ ಫೈರೋಝ್, ಇಸ್ಮಾಯಿಲ್ ಫೈರೋಝ್, ಬದ್ರುದ್ದೀನ್ ಇನಾಮ್ ಮಾಣಿ, ಇಬ್ರಾಹಿಮ್, ರವೂಫ್ ಕೊಡಾಜೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಸುದೀಪ್ ಶೆಟ್ಟಿ, ಬಾಲಕೃಷ್ಣ ಆಳ್ವ, ಜನಾರ್ಧನ, ತ್ವಾಹ, ತ್ವಾಹಿರ್, ರಾಝೀ, ರಾಫೀ ಮುಂತಾದ ಊರಿನ ನಾಗರೀಕರು ಸೇರಿ ತಮ್ಮ ಕೈಯಿಂದ ಸುಮಾರು ಐದುಸಾವಿರ ರುಪಾಯಿಯನ್ನು ಕರ್ಚುಮಾಡಿ ಅದಕ್ಕೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಿ ಆಂಬುಲೆನ್ಸ್ ಕರೆಸಿ ಪುತ್ತೂರಿನ ಶವಾಗಾರಕ್ಕೆ ಕಳುಹಿಸಿ ಕೊಟ್ಟು ಮಾನವೀಯತೆಯ ಕೊಂಡಿ ಈಗಲೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾದರು.

Leave A Reply

Your email address will not be published.