ಕಡಬ : ಬೊಲೆರೋ ವಾಹನವೊಂದು ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯ ಬಳಿ ನಡೆದಿದೆ.

ಹೊಸ್ಮಠ ಸೇತುವೆಯ ವೇಗ ನಿಯಂತ್ರಕವನ್ನು ದಾಟಿದ ಬೊಲೆರೋ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ. ಇದು ದೊಡ್ಡ ಅಪಘಾತವಾಗಿದ್ದು ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಬೊಲೆರೋ ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.