ಮಾ.3 / ಬೆಟ್ಟಂಪಾಡಿ-ಇರ್ದೆಯಲ್ಲಿ ದೈವಗಳ ನೇಮೋತ್ಸವ

ಪುತ್ತೂರು : ಬೆಟ್ಟಂಪಾಡಿ- ಇರ್ದೆ ಶ್ರೀ ಉಳ್ಳಾಕುಲು ಮೈಸಂದಾಯ ಶ್ರೀ ಸತ್ಯದೇತೆ ಕಲ್ಕುಡ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮಾ.3ರ ಮಂಗಳವಾರ ನಡೆಯಲಿದೆ.


Ad Widget

Ad Widget

Ad Widget

Ad Widget

Ad Widget

Ad Widget
File Photo

ಮಾ.3ರಂದು ಬೆಳಿಗ್ಗೆ ನಾಗತಂಬಿಲ,ಗಣಹೋಮ ನಂತರ  ಉಳ್ಳಾಕುಲು ,ಮೈಸಂದಾಯ,ಪೊಟ್ಟ ಭೂತ ನೇಮೋತ್ಸವ ನಡೆಯಲಿದೆ.ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

File Photo

ಸಾಯಂಕಾಲ  ವರ್ಣಾರ ಪಂಜುರ್ಲಿ ಭಂಡಾರ ತೆಗೆದು ನೇಮೋತ್ಸವ,ರಾತ್ರಿ ಕಲ್ಲುರ್ಟಿ,ಕಲ್ಕುಡ ,ಗುಳಿಗ,ದೂಮಾವತಿ ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ ,ಅನ್ನಸಂತರ್ಪಣೆ ನಡೆಯಲಿದೆ.

File Photo

ಅಲ್ಲದೆ ಪ್ರತೀ ಮಂಗಳವಾರ,ಶುಕ್ರವಾರ,ಆದಿತ್ಯವಾರದಂದು ಇಲ್ಲಿ ಕುಂಕುಮಾರ್ಚನೆ,ಮಂಗಳಾರತಿ ಸೇವೆ ಹಾಗೂ ಪ್ರತೀ ತಿಂಗಳ ಸಂಕ್ರಮಣ ದಿನದಂದು ಅಗೇಲು ಸೇವೆ ನಡೆಯುತ್ತದೆ ಎಂದು ರಾಮ ರಾಯ ಮಲ್ಯ ಕಾಸರಗೋಡು,ರಾಮಣ್ಣ ಪೂಜಾರಿ ಇರ್ದೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: