ಉಪ್ಪಿನಂಗಡಿ: ದೆಹಲಿ ಹಿಂಸಾಚಾರ ವಿರುದ್ಧ ಪ್ರತಿಭಟನೆ

ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ಇಂದು ಉಪ್ಪಿನಂಗಡಿಯ ಪೃಥ್ವಿ ಶಾಪಿಂಗ್ ಮಾಲ್ ಎದುರುಗಡೆ ದೆಹಲಿಯ ಹಿಂಸಾಚಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು.

 

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಕಪಿಲ್ ಶರ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಮುಸ್ಲಿಮರ ಮಾರಣ ಹೋಮ ನಡೆಯುತ್ತಿದೆ. ಈಗ ಸತ್ತವರ ಸಂಖ್ಯೆ 35 ಜನರು ಎಂದು ಹೇಳಲಾಗುತ್ತಿದೆ. ಆದರೆ ಆ ಸಂಖ್ಯೆ ಇನ್ನೂ ಜಾಸ್ತಿಯಾಗುತ್ತದೆ. ಸತ್ತವರು ಹೆಚ್ಚಿನವರು ಮುಸ್ಲಿಮರು.

ಧರ್ಮವು ಸಮಾಜವನ್ನು ಒಡೆಯುವುದು ಬೇಡ. ನಾವು ಈಗ ಎಲ್ಲದಕ್ಕೂ ಸಿದ್ಧರಾಗಬೇಕು. ನಾವು ಶಾಂತಿಗೂ ಸಿದ್ದ , ಸಮರಕ್ಕೂ ಸಿದ್ಧ ಎಂದು ಈ ಸಂದರ್ಭದಲ್ಲಿ ಹಲವು ಭಾ ಷಣಕಾರರು ಹೇಳಿದರು.

Leave A Reply

Your email address will not be published.