ವಿದ್ಯಾರಶ್ಮಿ ಕಾಲೇಜಿನ ಗೋಡೆಯಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಅನಾವರಣ

0 15

ಸವಣೂರು: ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿಗಳು ಗಾಂಧೀಜಿಯವರ ಮೂಲ ಶಿಕ್ಷಣದ ಪರಿಕಲ್ಪನೆಗೆ ಪ್ರತೀಕವಾಗಿ ಕಾಲೇಜಿನಲ್ಲಿ ತಮ್ಮ ತರಗತಿಗೆ ತಾವೇ ಕಲಾತ್ಮಕವಾಗಿ ಬಣ್ಣವನ್ನು ಬಳಿಯುವ ಮೂಲಕ ಸೃಜನಶೀಲತೆಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಪ್ರತಿಯೊಬ್ಬರಲ್ಲೂ ತನ್ನದೇ ಆದ ವಿಶೇಷ ಪ್ರತಿಭೆ ಅಡಗಿದೆ. ಆದರೆ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಬೇಕಿದೆ.ಈ ನಿಟ್ಟಿನಲ್ಲಿ ವಿದ್ಯಾರಶ್ಮಿ ಯ ಆಡಳಿತ ಮಂಡಳಿ, ಸಂಚಾಲಕರಾದ ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ,ಪ್ರಾಚಾರ್ಯರಾದ ರಾಜಲಕ್ಷ್ಮಿ ರೈ ಅವರ ಪ್ರೋತ್ಸಾಹ ಬೆಂಬಲ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪೂರಕವಾಗಿದೆ.

Leave A Reply