ರಾಮಕುಂಜ | ಕಡಬ ತಾಲೂಕು ಒಂದನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

0 7

ಕಡಬ : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಡಬ ತಾಲೂಕು ಘಟಕದ ಆಶ್ರಯದಲ್ಲಿ ಕಡಬ ತಾಲೂಕಿನ ಒಂದನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶ್ವೇಶನಗರ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದ ಡಾ|ಎಂ.ಚಿದಾನಂದಮೂರ್ತಿ , ಅರ್ಬಿ ರಾಜಮ್ಮ ಮತ್ತು ಶ್ರೀನಿವಾಸ ಭಟ್ಟ ಸಭಾಂಗಣ , ಪರಮಪೂಜ್ಯ ವಿಶ್ವೇಶತೀರ್ಥ ವೇದಿಕೆ ವೇದಿಕೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಆರಂಭಗೊಂಡಿತ್ತು.

ಬೆಳಿಗ್ಗೆ ಕಾಲೇಜಿನ ವಠಾರದಲ್ಲಿ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್ ಕೆ ಧ್ವಜರೋಹನಗೈದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಉಪನ್ಯಾಸಕಿ ರಮ್ಯ ತಾವೂರು ಸ್ವಾಗತಿಸಿದರು. ಸಮ್ಮೇಳನ ಅಧ್ಯಕ್ಷ ನಾರಾಯಣ ಭಟ್ ಉಪಸ್ಥಿತರಿದ್ದರು.

ಉಪನ್ಯಾಸಕ ಸತೀಶ್ ಜಿ ಆರ್ ವಂದಿಸಿದರು. ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿಯಲ್ಲಿ ಕನ್ನಡ ಭುವನೇಶ್ವರಿಯ ದಿಬ್ಬಣಕ್ಕೆ ತಾಲೂಕು ಸದಸ್ಯೆ ಜಯಂತಿ ಆರ್ ಗೌಡ ಚಾಲನೆ ನೀಡಿದರು. ಉದ್ಯಮಿ ಎಸ್ ಕೆ ಆನಂದ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚಣೆಗೈದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾದ ಕಾರ್ಯದರ್ಶಿ ರಾಧಕೃಷ್ಣ ಕೆ ಎಸ್ ದೀಪ ಪ್ರಜ್ವಲನ ಮಾಡಿದರು. ಶರತ್ ಸ್ವಾಗತಿಸಿದರು. ಪ್ರೇಮಾ ವಂದಿಸಿದರು. ಪ್ರಫುಲ್ಲ ನಿರ್ವಹಿಸಿದರು.

ಬಳಿಕ ಕಾಲೇಜು ಆವರಣದಲ್ಲಿ ಕಸಾಪ ದ.ಕ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಕಡಬ ತಾಲೂಕು ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಸಮ್ಮೇಳನ ಧ್ವಜಾರೋಹಣ ನೆರವೇರಿಸಿದರು. ರಾಧಕೃಷ್ಣ ಎಂ ಸ್ವಾಗತಿಸಿದರು. ವಾಸಪ್ಪ ವಂದಿಸಿದರು. ಹೇಮಲತಾ ಬಾಕಿಲ ನಿರ್ವಹಿಸಿದರು.

ಶ್ರೀ ರಾಮಕುಂಜೇಶ್ವರ ವಿದ್ಯಾ ವರ್ದಕ ಸಭಾದ ಅಧ್ಯಕ್ಷ ಇ.ಕೃಷ್ಣಮೂರ್ತಿ ವಿಜ್ಞಾನ ಪ್ರದಶ್ಣ ಉದ್ಘಾಟಿಸಿದರು. ಕಡಬ ತಹಶಿಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಕಲಾ ಪ್ರದರ್ಶನ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೊತ್ತಮ ಗೌಡ ಪುಸ್ತಕ ಪ್ರದರ್ಶನ ಉದ್ಘಟಿಸಿದರು. ಪ್ರಾಚ್ಯ ವಸ್ತು ಪ್ರದರ್ಶನವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿದರು. ತಾ.ಪಂ ಸದಸ್ಯೆ ತೇಜಸ್ವಿನಿ ಕಟ್ಟಪುಣಿ , ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಕೋಶಾಧಿಕಾರಿ ಸೇಸಪ್ಪ ರೈ ಸ್ವಾಗತಸಿಸಿದರು. ಶಿಕ್ಷಕಿ ಮಲ್ಲಿಕಾ ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು. ಐತ್ತಪ್ಪ ನಾಯ್ಕ ಉದ್ಘಾಟಕರನ್ನು ಪರಿಚಯಿಸಿದರು. ಲಕ್ಷ್ಮೀ ನಾರಾಯಣ ರಾವ್ ಆತೂರು ವಂದಿಸಿದರು. ಸಗಣರಾಜ ಕುಂಬ್ಲೆ, ಮಮತಾ ಕೆ ನಿರ್ವಹಸಿದರು. ಬಳಿಕ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Leave A Reply