ಮಂಗಳೂರು : ಉದ್ಯಮಿ ಎಜೆ ಶೆಟ್ಟಿ ಅವರಿಗೆ ಸೇರಿದ ಕಟ್ಟಡ ಕೆಲಸದ ವೇಳೆ ಮಣ್ಣು ಕುಸಿದು ಎರಡು ಸಾವು

0 7

ಮಂಗಳೂರಿನ ಬಂಟ್ಸ್‌ ಹಾಸ್ಟಲ್‌ ಸರ್ಕಲ್ ಬಳಿ, ಹೊಸದಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದ ಬಳಿ ರಸ್ತೆ ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೆ ಮೂರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. 

ಉದ್ಯಮಿ ಎಜೆ ಶೆಟ್ಟಿ ಅವರಿಗೆ ಸೇರಿದ ಕಟ್ಟಡ ಇದಾಗಿದ್ದು, ಈ ಕಟ್ಟಡದ ಕೆಳಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲು ಒಂದು ಕಡೆಯಿಂದ ಮಣ್ಣು ತೋಡಲಾಗುತ್ತಿತ್ತು. ಪಕ್ಕದಲ್ಲೇ ರಸ್ತೆ ಇತ್ತು. ರಸ್ತೆಯ ಮಣ್ಣು ದಿಡೀರನೆ ಕಾರ್ಮಿಕರ ಮೇಲೆ ಕುಸಿದು ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾ ನೆ.

ಅವೈಜ್ಞಾನಿಕವಾಗಿ ಅರ್ಥ ವರ್ಕ್ ಮಾಡಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಮತ್ತು ನೆರೆಹೊರೆಯವರು ಸೇರಿಕೊಂಡು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Leave A Reply