ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಪುತ್ತೂರಿನ ಅರುಣ್ ಶ್ಯಾಂ ನೇಮಕ
ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ (ಶೈಕ್ಷಣಿಕ ಸಮಿತಿ) ಸದಸ್ಯರಾಗಿ ಹೈಕೋರ್ಟ್ ವಕೀಲ ಪುತ್ತೂರಿನ ಅರುಣ್ ಶ್ಯಾಂ ನೇಮಕಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಸರಕಾರ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾವು ಅರುಣ್ ಶ್ಯಾಂ ಅವರನ್ನು ನೇಮಕಗೊಳಿಸಿ ಆದೇಶಿಸಿದೆ.
ಎನ್‌ಎಲ್‌ಐಎಸ್‌ಯು ಕಾಯ್ದೆ ಪ್ರಕಾರ, ಕಾನೂನು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಎಲ್ಲಾ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳ ಬಗ್ಗೆ ಈ ಸಮಿತಿ ಸದಸ್ಯರು ನಿರ್ಣಯ ಕೈಗೊಳ್ಳಲಿದ್ದಾರೆ. ಮುಂದಿನ 3 ವರ್ಷಗಳ ಕಾಲ ಇವರು ಕೌನ್ಸಿಲ್‌ನ ಸದಸ್ಯರಾಗಿರಲಿದ್ದಾರೆ.
ಈ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೋತ್ರಾ, ವಿನೀತ್ ಸರಣ್, ಸಂಜೀವ್ ಖನ್ಹಾ, ಭೂಷನ್ ಆರ್. ಗವೈ, ಅಜ್ಜಿಕುಟ್ಟಿರಾ ಎಸ್. ಬೋಪಣ್ಣ, ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಸೇರಿದಂತೆ ಬಾರ್ ಕೌನ್ಸಿಲ್ ಪ್ರತಿನಿಧಿಗಳು ಸೇರಿದಂತೆ 24 ಸದಸ್ಯರು ಸಮಿತಿಯಲ್ಲಿದ್ದಾರೆ.