ಭಾರತೀಯ ನೌಕಾಪಡೆಯ ಮಿಗ್ ವಿಮಾನ ಪತನ

ಗೋವಾ: ತಾಲೀಮಿನಲ್ಲಿ ತೊಡಗಿದ್ದ ಭಾರತೀಯ ನೌಕಾಪಡೆಗೆ ಸೇರಿದ ಮಿಗ್ -29K ವಿಮಾನ ಗೋವಾದಲ್ಲಿ ಪತನಗೊಂಡಿದ್ದು, ಅವಘಡದಲ್ಲಿ ವಿಮಾನದ ಪೈಲೆಟ್ ಸುರಕ್ಷಿತವಾಗಿ ಪಾರಾಗಿದ್ದಾರೆ.

ಫೆ.23ರಂದು ಬೆಳಗ್ಗೆ 10.30ರ ಸುಮಾರಿಗೆ ಈ ವಿಮಾನ ತಾಲೀಮಿನಲ್ಲಿ ತೊಡಗಿತ್ತು. ಕೆಲವೇ ಕ್ಷಣಗಳಲ್ಲಿ ಇದು ಪತನಗೊಂಡಿದೆ.

ಘಟನೆಗೆ ಸ್ಪಷ್ಟ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಈ ಬಗ್ಗೆ ತನಿಖೆ ಆರಂಭಗೊಂಡಿದೆ.

Leave A Reply

Your email address will not be published.