ಕೊಳ್ತಿಗೆ ಪ್ರಾ.ಕೃ.ಪ.ಸಹಕಾರ ಸಂಘ : ಕಾಂಗ್ರೆಸ್ ಬೆಂಬಲಿಗರ ಮೇಲು ಗೈ

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಆಡಳಿತಾರೂಡ ಸಹಕಾರ ಭಾರತಿ ಅಧಿಕಾರ ಕಳೆದುಕೊಂಡಿದೆ.

ಆಯ್ಕೆಯಾದವರು

ಸಾಲಗಾರರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗಂಗಾಧರ ಗೌಡ ಕೆ,ವಸಂತ ಕುಮಾರ್ ರೈ ಕೆ,ವೆಂಕಟರಮಣ ಕೆ.ಎಸ್,ಬಿಜೆಪಿಯ ತೀರ್ಥಾನಂದ ದುಗ್ಗಳ,ಸತೀಶ್ ಪಾಂಬಾರು, ಪ.ಜಾ.ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗುರುವಪ್ಪ ಎಂ,ಪ.ಪಂ.ಕ್ಷೇತ್ರದಲ್ಲಿ ಹಾಲಿ ಉಪಾಧ್ಯಕ್ಷ ಬಿಜೆಪಿ ಯ ಅಣ್ಣಪ್ಪ ನಾಯ್ಕ ಬಿ,ಹಿಂದುಳಿದ ವರ್ಗ ಎ ಸ್ಥಾನದಲ್ಲಿ ಕಾಂಗ್ರೆಸ್ ನ ಶಿವರಾಮ, ಹಿಂದುಳಿದ ವರ್ಗ ಬಿ ಸ್ಥಾನದಲ್ಲಿ ಹಾಲಿ ಅಧ್ಯಕ್ಷ ಬಿಜೆಪಿಯ ವಸಂತ ಕುಮಾರ್ ಕೆ ಪೆರ್ಲಂಪಾಡಿ,ಮಹಿಳಾ ಸ್ಥಾನದಿಂದ ಕಾಂಗ್ರೆಸ್ ನ ಲಕ್ಷ್ಮೀ ಕೆ.ಜಿ,ನಾಗವೇಣಿ ಕೆ.ಕೆ, ,ಸಾಲಗಾರರಲ್ಲದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿಶಾಲಾಕ್ಷಿ ಆಯ್ಕೆ ಯಾಗಿದ್ದಾರೆ.

ಕಾಂಗ್ರೆಸ್8 ,ಬಿಜೆಪಿ ಸಹಕಾರ ಭಾರತಿಯ 4ಮಂದಿ ನಿರ್ದೇಶಕರಾಗಿ ಆಯ್ಕೆ ಯಾಗುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಕಳೆದ ಅವಧಿಯಲ್ಲಿ ಬಿಜೆಪಿ ಅಧಿಕಾರ ದ ಚುಕ್ಕಾಣಿ ಹಿಡಿದಿತ್ತು.

ಕಳೆದ ಅವಧಿಯಲ್ಲಿ1 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ತನ್ನ ಸಂಘಟನಾ ಚತುರತೆಯಿಂದ 7 ಸ್ಥಾನಗಳನ್ನು ಹೆಚ್ಚಿಕೊಂಡಿದೆ‌.ಬಿಜೆಪಿ ಆತ್ಮಾವಲೋಕನ‌ ಮಾಡಿಕೊಳ್ಳಬೇಕಿದೆ. ಈ ಬಾರಿ ಪಾಲ್ತಾಡಿ ಗ್ರಾಮದಿಂದ ಎರಡೂ ಪಕ್ಷದಿಂದ ಒಂದೂ ನಿರ್ದೇಶಕರು ಆಯ್ಕೆಯಾಗಿಲ್ಲ..

error: Content is protected !!
Scroll to Top
%d bloggers like this: