Day: February 21, 2020

ವಿಟ್ಲದ ಪುಣಚ ಗ್ರಾಮದಲ್ಲಿ ‘ ಪ್ರೀತ್ಸೇ ಪ್ರೀತ್ಸೇ ‘ ಎಂದು ಅಪ್ರಾಪ್ತೆಯ ಪೀಡನೆ : ಆರೋಪಿ ಮನೋಹರನ ಮೇಲೆ ಪೋಕ್ಸೋ ಜಡಿದಿದೆ !

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ನಿವಾಸಿಯಾಗಿರುವ 7ನೇ ತರಗತಿಯ ವಿಧ್ಯಾರ್ಥಿನಿಯನ್ನು, ಪುಣಚ ಗ್ರಾಮದ ಮನೋಹರ ಎಂಬಾತನು ಸುಮಾರು ಒಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದನು. ದಿನಾಂಕ : 02.02.2020 ರಂದು ಸಂತ್ರಸ್ಥ ಬಾಲಕಿಯು ಪರಿಯಾಲ್ತಡ್ಕ ಪೇಟೆಗೆ ಹೋಗಿ ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ವಾಪಾಸ್ ಬರುವಾಗ ಪುಣಚ ಗ್ರಾಮದ ತೋರಣಕಟ್ಟೆ ಎಂಬಲ್ಲಿ ಆಕೆ ಒಬ್ಬಳೇ ನಿಂತಿದ್ದಳು. ಆ ಸಮಯದಲ್ಲಿ ಆರೋಪಿಯಾದ ಮನೋಹರನು ಮೋಟಾರ್ ಸೈಕಲ್ ನಲ್ಲಿ ಬಂದು ಬಾಲಕಿಗೆ ಕಿರುಕುಳವನ್ನು ನೀಡಿದ್ದನು. ಬಾಲಕಿಯು ಆ ಕೂಡಲೇ ವಿಷಯವನ್ನು ಮನೆಯವರಿಗೆ …

ವಿಟ್ಲದ ಪುಣಚ ಗ್ರಾಮದಲ್ಲಿ ‘ ಪ್ರೀತ್ಸೇ ಪ್ರೀತ್ಸೇ ‘ ಎಂದು ಅಪ್ರಾಪ್ತೆಯ ಪೀಡನೆ : ಆರೋಪಿ ಮನೋಹರನ ಮೇಲೆ ಪೋಕ್ಸೋ ಜಡಿದಿದೆ ! Read More »

ಬರೆಪ್ಪಾಡಿ | ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ| ಜೀರ್ಣೋದ್ಧಾರ ಸಂಕಲ್ಪ ವಿಧಿ

ಕಡಬ : ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಇರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 20 ನೇವರ್ಷದ ಮಹಾಶಿವರಾತ್ರಿ ಉತ್ಸವ ಹಾಗೂ ಕ್ಷೇತ್ರದ ಜೀರ್ಣೋದ್ಧಾರ ಸಂಕಲ್ಪ ವಿಧಿ ಕಾರ್ಯಕ್ರಮ ಫೆ 21 ರಂದು ನಡೆಯಿತು. ಸಂಜೆ ಶ್ರೀ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಹಾಗೂ, ಕೆಳಗಿನಕೇರಿ ಕೊಪ್ಪ ಶ್ರೀ ಶಾರದಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ದೇವರಿಗೆ 108 ಸೀಯಾಳ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ಬಳಿಕ ಗುರುಪ್ರಿಯಾ ನಾಯಕ್ ಹಾಗೂ …

ಬರೆಪ್ಪಾಡಿ | ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ| ಜೀರ್ಣೋದ್ಧಾರ ಸಂಕಲ್ಪ ವಿಧಿ Read More »

ವಿವಿಧ ಕಲೆಗಳಲ್ಲಿ ಪಳಗಿದ ಪ್ರತಿಭೆ । ಯಕ್ಷಗಾನ, ನಾಟ್ಯ, ಭಾಗವತಿಕೆಯಲ್ಲಿ ಮಿಂಚುತ್ತಿರುವ ಕಡಬದ ಶ್ರೇಯಾ

ಕರಾವಳಿಯಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಈ ಭಾಗದ ಜನ ಕಲೆಗೆ ತಮ್ಮದೇ ಆದ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕರಾವಳಿ ಎಂದ ಕೂಡಲೇ ಮೊದಲು ನೆನಪಿಗೆ ಬರೋದು ಯಕ್ಷಗಾನದ ವೈಭವದ ಕುಣಿತ, ಭಾಗವತಿಗೆ ಇಂತಹ ಕಲೆಯನ್ನು ಮೈಗೂಡಿಸಿಕೊಂಡು ಯಕ್ಷಗಾನ ಗಂಡು ಕಲೆಯಲ್ಲಿ ಹೆಣ್ಣು ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬುದನ್ನು ತೊರಿಸಿಕೊಟ್ಟಿರುವರು ಶ್ರೇಯಾ ಎ. ಹೆತ್ತವರ ಪೊತ್ಸಾಹ ಇವರು ಕಡಬ ತಾಲೂಕಿನ ಆಲಂಕಾರು ಪೆರಾಬೆ ಯೋಗೀಶ ಆಚಾರ್ಯ ಮತ್ತು ಶ್ಯಾಮಲ ದಂಪತಿಯ ಪುತ್ರಿ. ಪ್ರಸ್ತುತ ತೆಂಕಿಲ ವಿವೇಕಾನಂದ ಕನ್ನಡ …

ವಿವಿಧ ಕಲೆಗಳಲ್ಲಿ ಪಳಗಿದ ಪ್ರತಿಭೆ । ಯಕ್ಷಗಾನ, ನಾಟ್ಯ, ಭಾಗವತಿಕೆಯಲ್ಲಿ ಮಿಂಚುತ್ತಿರುವ ಕಡಬದ ಶ್ರೇಯಾ Read More »

ಅರಂತೋಡು| ಈಜಲು ಹೋದ ಮಾಡಾವಿನ ಯುವಕ ಮೃತ್ಯು

ಸುಳ್ಯ : ಸಂಬಂಧಿಕರ ಮನೆಗೆ ಬಂದಿದ್ದ ಯುವಕನೋರ್ವ ನದಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಂತೋಡು ಕೊಡೆಂಕಿರಿ ಎಂಬಲ್ಲಿ ಫೆ.21 ರಂದು ನಡೆದಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವಿನ ಸಣಂಗಳ ನಿವಾಸ ರಂಜಿತ್ ಪೂಜಾರಿ(24.ವ) ಎಂಬ ಯುವಕ ಕೊಡೆಂಕಿರಿಗೆ ಸಂಬಂಧಿಕರ ಮನೆಗೆ ಹೋಗಿದ್ದ. ಅಲ್ಲಿ ಮನೆಯ ಸಮೀಪದ ನದಿಗೆ ಈಜಲು ಹೋದಾಗ ನೀರಿನಲ್ಲಿ ಮೃತಪಟ್ಟ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ದೇರಾಜೆ | ಸ್ಪೋಟಕ ಸಿಡಿದು ಮುಖ ಛಿದ್ರಗೊಂಡ ಹಸುವಿಗೆ ದಯಾಮರಣ !

ಕಡಬ ತಾಲೂಕಿನ ದೇರಾಜೆ ಸಂಪಡ್ಕದಲ್ಲಿ ಆಹಾರ ಹುಡುಕುತ್ತಾ ಬಂದ ಹಸುವೊಂದು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಇಟ್ಟು ಹೋಗಿದ್ದ ತೋಟೆಗೆ ಬಾಯಿಹಾಕಿ ಸ್ಫೋಟಗೊಂಡು ಅದರ ತೀವ್ರತೆಗೆ ಹಸುವಿನ ಮುಖ ಛಿದ್ರ ವಾಗಿ ಕೆಳದವಡೆ ನೇತಾಡುತ್ತಿತ್ತು. ಹಸು ತಾನು ಮಾಡದ ತಪ್ಪಿಗೆ ಎಲ್ಲಾ ನೋವು ತಿಂದುಕೊಂಡು ಕಣ್ಣೀರು ಕೆಡವಿಕೊಂಡಿತ್ತು. ಹಸುವನ್ನು ಪರಿಶೀಲಿಸಿದ ಪಶು ವೈದ್ಯರು ಹಸುವನ್ನು ಚಿಕಿತ್ಸೆ ಮೂಲಕ ಸರಿಪಡಿಸುವುದು ಅಸಾಧ್ಯ ಎಂಬ ಮಾಹಿತಿ ನೀಡಿದರು. ಬಳಿಕ ಮನೆಯವರೊಂದಿಗೆ ಮಾತನಾಡಿ, ಪೊಲೀಸರ ಸಮ್ಮುಖದಲ್ಲಿ, ಪಶು ವೈದ್ಯರ ಸಹಾಯದಿಂದ ಹಸುವಿಗೆ ದಯಾಮರಣ …

ಕಡಬ ದೇರಾಜೆ | ಸ್ಪೋಟಕ ಸಿಡಿದು ಮುಖ ಛಿದ್ರಗೊಂಡ ಹಸುವಿಗೆ ದಯಾಮರಣ ! Read More »

ಫೆ.22 : ಸವಣೂರು ಸರಕಾರಿ ಕಾಲೇಜು ಕಟ್ಟಡ ಉದ್ಘಾಟನೆ

ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಂ.ಆರ್.ಪಿ.ಎಲ್‍ನ ಸಿಎಸ್‍ಆರ್ ಅನುದಾನದಲ್ಲಿ ನಿರ್ಮಾಣವಾದ ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ ಫೆ 22 ನೇ ಶನಿವಾರ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಟ್ಟಡ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಳ್ಯ ಶಾಸಕ ಎಸ್ .ಅಂಗಾರ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ. ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ಧನ್, ತಾ.ಪಂ ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ, ಸವಣೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ಬಿ.ಕೆ, …

ಫೆ.22 : ಸವಣೂರು ಸರಕಾರಿ ಕಾಲೇಜು ಕಟ್ಟಡ ಉದ್ಘಾಟನೆ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯ | ಅಣಕು ನ್ಯಾಯಾಲಯ ಸ್ಪರ್ಧೆ ಯಶಸ್ವಿ ಪ್ರದರ್ಶನ

” ಅಣಕು ನ್ಯಾಯಾಲಯ ಸ್ಪರ್ಧೆಯು ವಕೀಲ ವೃತ್ತಿಯ ಅನುಭವವನ್ನು ಕೊಡುತ್ತದೆ “ ಅಣಕು ನ್ಯಾಯಾಲಯ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳಿಗೆ, ವಕೀಲ ವೃತ್ತಿಯ ಅನುಭವವನ್ನು ಕೊಡುತ್ತದೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವೃತ್ತಿಜೀವನದ ಅನುಭವವನ್ನು ನೀಡುತ್ತದೆ ಎಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ನಟರಾಜ್ ಆರ್. ಹೇಳಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವತಿಯಿಂದ ದಿನಾಂಕ 21 ಫೆಬ್ರವರಿ 2020 ರಂದು ಜರುಗಿದ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ …

ವಿವೇಕಾನಂದ ಕಾನೂನು ಮಹಾವಿದ್ಯಾಲಯ | ಅಣಕು ನ್ಯಾಯಾಲಯ ಸ್ಪರ್ಧೆ ಯಶಸ್ವಿ ಪ್ರದರ್ಶನ Read More »

ಮಾಜಿ ಸಚಿವ ಸಿ.ಚನ್ನಿಗಪ್ಪ ಇನ್ನಿಲ್ಲ

ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಸಿ.ಚನ್ನಿಗಪ್ಪ ಶುಕ್ರವಾರ ನಿಧನರಾಗಿದ್ದಾರೆ.ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಚನ್ನಿಗಪ್ಪ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಧರಂಸಿಂಗ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದರು. ಅಷ್ಟೇ ಅಲ್ಲದೇ ಎಚ್​. ಡಿ.ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಅರಣ್ಯ ಸಚಿವರಾಗಿದ್ದರು. ಸಾಮಾನ್ಯ ರೈತ ಕುಟುಂಬದ ಚನ್ನಿಗಪ್ಪ, ಪೊಲೀಸ್ ಹುದ್ದೆ ತೊರೆದು …

ಮಾಜಿ ಸಚಿವ ಸಿ.ಚನ್ನಿಗಪ್ಪ ಇನ್ನಿಲ್ಲ Read More »

ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಹಡಿನಬಾಳ ಶ್ರೀಪಾದ ಹೆಗ್ಗಡೆಗೆ ನೆರವು

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ವತಿಯಿಂದ ಹಡಿನಬಾಳ ಶ್ರೀಪಾದ ಹೆಗ್ಗಡೆ ಗೆ ಅವರಿಗೆ 25,000 ಧನಸಹಾಯ ನೀಡಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಹವ್ಯಾಸಿ ಘಟಕದ ಗೌರವಾಧ್ಯಕ್ಷರಾಗಿರುವ ಡಾ.ಎಂ ಪ್ರಭಾಕರ್ ಜೋಷಿ ಯವರು,ಶ್ರೀಪಾದ ಹೆಗ್ಗಡೆ ಯವರ ಮನೆಗೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿ ಚೆಕ್ ಹಸ್ತಾಂತರಿಸಿದರು.

ದಕ್ಷಿಣ ಕಾಶಿ ಯಲ್ಲಿ ಶಿವರಾತ್ರಿ ಸಂಭ್ರಮ

ದೇಶದೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲಾ ಶಿವ ದೇವಸ್ಥಾನಗಳಲ್ಲಿ ಇಂದು ಭಕ್ತರ ದಂಡು ಶಿವನ ಆರಾಧನೆಯಲ್ಲಿ ಮಗ್ನವಾಗಿದೆ. ಶಿವನಿಗೆ ವಿಶೇಷ ಅಭಿಷೇಕ ಸೇವೆಯ ಜೊತೆಗೆ ರಾತ್ರಿ ಪೂರ್ತಿ ಜಾಗರಣೆಯನ್ನೂ ನಡೆಸುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿಯ ವಿಶೇಷ ಮಖೆ ಜಾತ್ರೆ ಆರಂಭಗೊಂಡಿದೆ. ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರದ ಉದ್ಭವಲಿಂಗಕ್ಕೆ ಭಕ್ತರೇ ಅಭಿಷೇಕ ಮಾಡುವುದು ಇಲ್ಲಿನ ವಿಶೇಷತೆ. ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ …

ದಕ್ಷಿಣ ಕಾಶಿ ಯಲ್ಲಿ ಶಿವರಾತ್ರಿ ಸಂಭ್ರಮ Read More »

error: Content is protected !!
Scroll to Top